ಚಿತ್ರದುರ್ಗ: ಹೃದಯಾಘಾತದಿಂದ ಡಿವೈಎಸ್ಪಿ ಮೃತಪಟ್ಟ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ.
ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಧೀಡಿರ್ ಕುಸಿದು ಬಿದ್ದ ಪರಿಣಾಮ ಡಿವೈಎಸ್ಪಿ ರಮೇಶ (52) ವರ್ಷ ಅವರನ್ನು ತಕ್ಷಣವೇ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಡಿಸಿಆರ್ಬಿ ಮತ್ತು ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಅವರು , 1998 ಬ್ಯಾಚ್ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು.
إرسال تعليق