ಮೈಸೂರು: ಸಾಲಬಾಧೆಯಿಂದ ಬಾರ್ ಓನರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕುವೆಂಪುನಗರದ ವಾಸಿ ಶಿವಲಿಂಗೇಗೌಡ (38)ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಲಿಂಗೇಗೌಡ ಅವರು ಕೆಲವು ಬಾರ್ ನಡೆಸುತ್ತಿದ್ದು, ಈ ವೇಳೆ ವ್ಯವಹಾರಗಳಲ್ಲಿ ನಷ್ಟವಾಗಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಕುವೆಂಪುನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣ ಕುವೆಂಪುನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
إرسال تعليق