ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೊಲೆರೋ ಮತ್ತು ಬೈಕ್ ಅಪಘಾತ; ಇಬ್ಬರು ಸಾವು

ಬೊಲೆರೋ ಮತ್ತು ಬೈಕ್ ಅಪಘಾತ; ಇಬ್ಬರು ಸಾವು

 


ದಾವಣಗೆರೆ: ಬೊಲೆರೋ ವಾಹನ ಮತ್ತು ಬೈಕ್ ಅಪಘಾತ ದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗೀಡಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಸಮೀಪ ನಡೆದಿದೆ. 

ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕುಮಾರ್ (42) ಮತ್ತು ಓಂಕಾರಪ್ಪ (51) ಮೃತಪಟ್ಟವರು ಎಂದು ಹೇಳಲಾಗಿದೆ.

ಇವರು ಚನ್ನಗಿರಿ ತಾಲೂಕು ವಡ್ನಾಳ್ ಗ್ರಾಮದ ನಿವಾಸಿಗಳಾಗಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم