ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ನೂತನ ಸ್ವಂತ ಕಟ್ಟಡ ರೆಡ್‌ಕ್ರಾಸ್ ಭವನ ನಿರ್ಮಾಣ ಕಾರ್ಯಕ್ಕೆ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಅ.15ರಂದು ಭೂಮಿಪೂಜೆ ನೆರವೇರಿಸಲಾಯಿತು.
ಕೋವಿಡ್ ನಿಯಮಾವಳಿಯಂತೆ ರೆಡ್‌ಕ್ರಾಸ್ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರುಗಳ ಸಮಕ್ಷಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಹಾಗೂ ರೆಡ್‌ಕ್ರಾಸ್ ಮಾಜಿ ಅಧ್ಯಕ್ಷ ಡಾ. ಶಾಂತರಾಮ ಶೆಟ್ಟಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ರೆಡ್‌ಕ್ರಾಸ್ ರಾಜ್ಯ ಘಟಕದ ಚೆಯರ್‌ಮೆನ್ ಎಸ್. ನಾಗಣ್ಣ, ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೆಯರ್‌ಮೆನ್ ಸಿಎ ಶಾಂತರಾಮ ಶೆಟ್ಟಿ, ರಶ್ಮಿ ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ ಬಿ. ನಿತ್ಯಾನಂದ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷ ಯೂಜಿನ್ ರೆಂಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಸತೀಶ್ ಭಂಡಾರಿ, ಡಾ. ಯು.ವಿ. ಶೆಣೈ, ಆರ್ಚ್ಬಾಲ್ಡ್ ಮಿನೆಜಸ್, ಬಿ. ರವೀಂದ್ರ ಶೆಟ್ಟಿ, ಡಾ. ಗಣಪತಿ ಗೌಡ, ಕಾರ್ಯದರ್ಶಿ ಎಸ್. ಎ ಪ್ರಭಾಕರ ಶರ್ಮಾ, ಮಾಜಿ ಅಧ್ಯಕ್ಷ ವಿಲಿಯಂ ಡಿ ಸೋಜಾ, ಪ್ರಭಾಕರ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯ ಹಿಂಭಾಗದ ಗೇಟ್‌ವೇ ಹೊಟೇಲ್‌ನ ಎದುರಿನಲ್ಲಿ 25 ಸೆಂಟ್ಸ್ ಜಾಗದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಈ ನೂತನ ಕಟ್ಟಡ ನಿರ್ಮಾಣವಾಗಲಿದೆ. ಪ್ರಕೃತಿ ವಿಕೋಪ ಸ್ಪಂದನೆಗೆ ಅಗತ್ಯ ಸಾಮಾಗ್ರಿಗಳನ್ನು ದಾಸ್ತಾನಿಡುವ ಸ್ಥಳ, ನಾನಾ ತರಬೇತಿ ನೀಡುವ ಉದ್ದೇಶದಿಂದ ವಿಶಾಲವಾದ ಸಭಾಂಗಣ, ರೆಡ್‌ಕ್ರಾಸ್ ಕಚೇರಿ, ಹಿರಿಯ ನಾಗರಿಕರ ಕೇಂದ್ರ, ವಿಶಾಲವಾದ ಪಾರ್ಕಿಂಗ್ ಪ್ರದೇಶ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق