ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೀಮಾ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ, ಉದಾರ ದಾನಿ ಬಿ. ಕೃಷ್ಣನ್ ಇನ್ನಿಲ್ಲ

ಭೀಮಾ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ, ಉದಾರ ದಾನಿ ಬಿ. ಕೃಷ್ಣನ್ ಇನ್ನಿಲ್ಲ

 



ಉಡುಪಿ: ಕೇರಳ ಕರ್ನಾಟಕ ತಮಿಳುನಾಡು ಆಂಧ್ರ ಸಹಿತ ಅನೇಕ ಕಡೆಗಳಲ್ಲಿ ಪ್ರಸಿದ್ಧ ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಗಳ ಆಡಳಿತ ನಿರ್ದೇಶಕ ಕೊಡುಗೈ ದಾನಿ ಬಿ. ಕೃಷ್ಣನ್ ಭಟ್‌ (76) ಇಂದು ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಮೂವರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ. 


ಉದ್ಯಮದ ಲಾಭಾಂಶದಲ್ಲಿ ಹತ್ತಾರು ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗೆ ಉದಾರ ದಾನ ನೀಡಿ ಧರ್ಮಭೀರು ಎನಿಸಿದ್ದರು. ಉಡುಪಿಯ ಕೃಷ್ಣ ಮಠ ಅಷ್ಟಮಠಗಳಿಗೆ ಅಪಾರ ದೇಣಿಗೆ ನೀಡುತ್ತಿದ್ದರು. 


ಅದಮಾರು, ಪೇಜಾವರ ಪಲಿಮಾರು ಪುತ್ತಿಗೆ, ಕಾಣಿಯೂರು ಕೃಷ್ಣಾಪುರ, ಸೇರಿದಂತೆ ಅಷ್ಟಮಠಾಧೀಶರು, ಶಾಸಕ ರಘುಪತಿ ಭಟ್ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಗಣ್ಯರು ಕೃಷ್ಣನ್ ನಿಧನಕ್ಕೆ ತೀವ್ರ ಆಘಾತ ಸಂತಾಪ  ವ್ಯಕ್ತಪಡಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم