ಸುಳ್ಯ: ಬಾಳಿಲದ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ- ಮುಪ್ಪೇರ್ಯ ಹಾಗೂ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ಸಹಭಾಗಿತ್ವದಲ್ಲಿ ಡಾ. ಜಿಪಿಎಸ್ ಪ್ರಕಾಶ್ ಅವರ ಸಂಸ್ಮರಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಅ.17ರಂದು ಬಾಳಿದ ವಿದ್ಯಾಬೋಧಿನೀ ಹೈಸ್ಕೂಲಿನಲ್ಲಿ ನಡೆಯಿತು.
ಸಾರ್ವಜನಿಕ ದೇವತಾರಾಧನಾ ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬೆಳ್ಳಾರೆ ಹೊರ ಠಾಣಾ ಪಿಎಸ್‌ಐ ಆಂಜನೇಯ ರೆಡ್ಡಿ ಉದ್ಘಾಟಿಸಿದರು. ಗ್ರಾಮ ವಿಕಾಸ ಮಂಗಳೂರು ವಿಭಾಗದ ಸಂಯೋಜಕ ಶ್ರೀನಿವಾಸ ಉಬರಡ್ಕ ಅವರು ಸಂಸ್ಮರಣಾ ಭಾಷಣ ಮಾಡಿದರು.
ಡಾ. ಪಿ.ಜಿ.ಎಸ್. ಪ್ರಕಾಶ್ ಅವರ ಪತ್ನಿ ಶ್ರೀಮತಿ ಲತಾಶಂಕರಿ ಮತ್ತು ನಿವೃತ್ತ ಕಸ್ಟಮ್ಸ್ ಅಧಿಕಾರಿ ಆರ್.ಕೆ ಭಟ್ ಕುರುಂಬುಡೇಲು, ಗೌರವ ಸಲಹೆಗಾರರಾದ ಎ.ಕೆ ನಾಯ್ಕ್ ಅಮೆಬೈಲು, ಅಶೋಕ ಶೆಟ್ಟಿ, ಅರ್ಚನ ಬಾಳಿಲ, ಸಮಿತಿಯ ಅಧ್ಯಕ್ಷ ರೋಹಿತ್ ಚಾಕೊಟೆಡ್ಕ್ ಮತ್ತು ಕಾರ್ಯದರ್ಶಿ ನಾಗೇಶ್ ಎನ್.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಶೋಭ ಎ.ಕೆ. ನಾಯ್ಕ್ ಪ್ರಾರ್ಥಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎ.ಎಂ ಸುಧಾಕರ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಸದಸ್ಯ ರಾಜೇಶ್ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
****
ಪಾಟಾಜೆ ಪಂಡಿತ ಮನೆತನದ (ಅಜ್ಜ ಅಪ್ಪ ಚಿಕ್ಕಪ್ಪ ಆಯುರ್ವೇದ ಪಂಡಿತರು) ಡಾ ಪಿ ಜಿ ಯಸ್ ಪ್ರಕಾಶರು ಕಳೆದ ಒಂದೂವರೆ ವರ್ಷ ಹಿಂದೆ ಆಕಸ್ಮಿಕ ಹೃದಯಾಘಾತದಿಂದ ನಿಧನರಾದರು. ಆಯುರ್ವೇದ ಡಿಗ್ರಿದೊಂದಿಗೆ ಅಲೋಪತಿಯ ಡಿಪ್ಲೊಮಾ ಹೊಂದಿದ್ದ ಪ್ರಕಾಶರು ಬಾಳಿಲದ ಸುತ್ತಮುತ್ತದ ಏಳೆಂಟು ಗ್ರಾಮಗಳಲ್ಲಿ ವೈದ್ಯರಾಗಿ ಜನಾನುರಾಗಿಯಾಗಿದ್ದರು. ಅತ್ಯಂತ ಕನಿಷ್ಟ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದುˌಹಲವಾರು ಬಡವರಿಗೆ ಉಚಿತ ಔಷಧಿ ನೀಡಿದ ನಿದರ್ಶನ ಸಾಕಷ್ಟು ಇತ್ತು ಮನೆಯ ಪಕ್ಕದಲ್ಲಿ ಕ್ಲಿನಿಕ್ ಹೊಂದಿದ ಇವರು ಹಗಲು ರಾತ್ರೆ ಎನ್ನದ ದಿನದ ಎಲ್ಲಾ ಸಮಯದಲ್ಲೂ ಚಿಕಿತ್ಸೆಗೆ ತಾಳ್ಮೆಯಿಂದ ಸ್ಪಂದಿಸಿದ ವಿಶೇಷತೆ ಹೊಂದಿದ್ದರು. ವೈದ್ಯರಿಗೆ ಇರಬೇಕಾದ ತಾಳ್ಮೆ, ರೋಗಿಗಳ ಬಗ್ಗೆ ಪ್ರೀತಿˌ ಅನುಕಂಪದ ಮಾತುಗಳಿಂದಾಗಿ ಈ ಭಾಗದ ಜನ ಬಹಳವಾಗಿ ಮೆಚ್ಚಿದ್ದರು. ಇದರ ಜತೆಯಲ್ಲಿ ಸಾರ್ವಜನಿಕ ಪ್ರಚಾರ ಇಲ್ಲದೇ ವಿದ್ಯಾರ್ಥಿಗಳು ರೋಗಿಗಳಿಗೆ ಆರ್ಥಿಕವಾಗಿ ಸಹಾಯ ನೀಡಿದ ಉದಾತ್ತ ಜೀವಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق