ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ 8ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಮತ್ತು ಕಲಾ ವೈವಿಧ್ಯವನ್ನು ನವೆಂಬರ್ 28,2021ನೇ ಭಾನುವಾರದಂದು ಮಂಗಳೂರಿನಲ್ಲಿ ಆಯೋಜಿಸುತ್ತಿದೆ. ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಪರಿಕಲ್ಪನೆಯಡಿ ಯೋಧ ಕವಿ ನಟ ದಿವಂಗತ ತಾರಾನಾಥ ಬೋಳಾರ್ ವೇದಿಕೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಾರ್ವಜನಿಕರಿಂದ ವಿಶಿಷ್ಟ ಲಾಂಛನವನ್ನು ವಿನ್ಯಾಸ ಮಾಡಲು ಆಹ್ವಾನಿಸಲಾಗಿದೆ.
ಚುಟುಕು ಸಾಹಿತ್ಯ, ಸಮಗ್ರ ಸಾಹಿತ್ಯ,ಕಲೆ, ಸಂಸ್ಕೃತಿ ಮತ್ತು ಅಧ್ಯಯನ ಹಿನ್ನೆಲೆಗಳ ಮಿಶ್ರಣವಿರುವ ಕಲಾ ಲಾಂಛನ ಅಪೇಕ್ಷಿತ. ಆಸಕ್ತರು 15×15 ಸೆಂಟಿ ಮೀಟರ್ ಅಳತೆಯ ಲಾಂಛನವನ್ನು ಬಿಳಿ ಹಾಳೆಯಲ್ಲಿ ರಚಿಸಿ, ಪೂರ್ತಿ ವಿಳಾಸದೊಂದಿಗೆ ನವೆಂಬರ್ 1 ರೊಳಗೆ ತಲುಪುವಂತೆ ykeditor@gmail.com ವಿಳಾಸಕ್ಕೆ ಮಿಂಚಂಚೆ ಮೂಲಕ ಕಳಿಸಿಕೊಡಲು ಕೋರಲಾಗಿದೆ.
ಆಯ್ಕೆಯಾಗುವ ಲಾಂಛನಕ್ಕೆ ನಗದು ಬಹುಮಾನ ಮತ್ತು ಲಾಂಛನ ಬಿಡಿಸಿದ ಕಲಾವಿದರಿಗೆ ಸಮ್ಮೇಳನದಲ್ಲಿ ಸನ್ಮಾನದ ಗೌರವ ಇರಲಿದೆ ಎಂದು ದ.ಕ ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಮತ್ತು ಮಂಗಳೂರು ತಾ| ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق