ಕಲಬುರಗಿ ; ಮೂವರು ಹೆಣ್ಣು ಮಕ್ಕಳ ಜೊತೆಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೂವರು ಮೃತಪಟ್ಟಿದ್ದು , ನಾಲ್ಕು ವರ್ಷದ ಬಾಲಕಿ ಪಾರಾದ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ತಾಯಿ ಲಕ್ಷ್ಮೀ ಏಳಕೆ (28 ವರ್ಷ), ಮಕ್ಕಳಾದ ಗೌರಮ್ಮ (6 ವರ್ಷ), ಸಾವಿತ್ರಿ (1 ವರ್ಷ) ಮೃತಪಟ್ಟಿದ್ದು, ಈಶ್ವರಿ (4 ವರ್ಷ) ದ ಮಗುವನ್ನು ಸ್ಥಳಿಯರು ರಕ್ಷಿಸಿದ್ದಾರೆ.
ಮೂರು ಜನ ಹೆಣ್ಣು ಮಕ್ಕಳಿರುವ ಕಾರಣಕ್ಕೆ ಗಂಡ ಹಾಗೂ ಗಂಡನ ಮನೆಯವರ ಕಿರುಕುಳವನ್ನು ತಾಳಲಾರದೇ ಲಕ್ಷ್ಮೀ ಗ್ರಾಮದ ಹೊರವಲಯದ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ನಿಂಬರ್ಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
إرسال تعليق