ನೀರ್ಚಾಲು: ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆ, ಗೋಲೋಕದ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ ಶ್ರಮದಾನವು ತಾರೀಕು 10-10-2021 ನೇ ಆದಿತ್ಯವಾರ ಶ್ರೀ ಹರಿ-ಹರ ಭಜನಾ ಮಂದಿರದ ವಠಾರದಲ್ಲಿ ಜರಗಿತು.
ಭಜನಾ ಮಂದಿರದ ಸ್ಥಳದಲ್ಲಿ ಬೆಳೆದಿರುವ ಹುಲ್ಲುಗಳನ್ನು ಸ್ವಚ್ಛಗೊಳಿಸಿ ಶ್ರೀ ಅಮೃತಧಾರಾ ಗೋಶಾಲೆ ಬಜಕೂಡ್ಲು, ಇಲ್ಲಿಗೆ ತಲುಪಿಸುವ ಕಾರ್ಯವು ಯಶಸ್ವಿಯಾಗಿ ಜರಗಿತು. ಮಾಡತ್ತಡ್ಕ ದೈವಗಳ ಸೇವಾ ಸಮಿತಿ ಹಾಗೂ ಶ್ರೀ ಹರಿ-ಹರ ಭಜನಾ ಮಂದಿರ ಮಾಡತಡ್ಕ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು.
ಮಿಂಚಿನಡ್ಕ ಗೋವಿಂದ ಭಟ್ಟರು, ಸುಬ್ರಹ್ಮಣ್ಯ ಭಟ್ಟ, ರಮೇಶ್ ಕೇರ, ಮಹೇಶ್ ಸರಳಿ, ಅರುಣ್ ಕುಮಾರ್, ಪ್ರವೀಣ್ ಕುಮಾರ್, ನಯನ್ ಕುಮಾರ್, ನಳಿನಾಕ್ಷನ್ ದೇವರ ಮೆಟ್ಟು ಮೊದಲಾದವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.
ಕೋವಿಡ್ ಮಾನದಂಡಕ್ಕೆ ಅನುಸಾರವಾಗಿ ನಿಯಮಪಾಲನೆಯೊಂದಿಗೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق