ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ʻಆಳ್ವಾಸ್ ಐ ಕೇರ್ ಯುನಿಟ್ʼಗೆ ಅಧಿಕೃತ ಚಾಲನೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರಿಬ್ಬನ್ ಕತ್ತರಿಸಿ ಕನ್ನಡಕ ವಿತರಿಸುವ ಮೂಲಕ ಉದ್ಘಾಟಿಸಿದರು.
ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಗ್ಲೌಕೋಮ ಚೆಕ್ ಅಪ್, ರೆಟಿನಾ ಇವಾಲ್ಯುಯೇಷನ್, ಡ್ರೈ ಐ ಇವಾಲ್ಯುಯೇಷನ್ ಸೇರಿದಂತೆ ಇತರ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆಗಳ ಸೌಲಭ್ಯ ಇರಲಿದೆ. ವಿವಿಧ ರೀತಿಯ ಕನ್ನಡಕಗಳ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ಹನಾ ಶೆಟ್ಟಿ, ಪ್ರಾಂಶುಪಾಲ ಡಾ. ಸಜಿತ್ ಎಂ., ಡಾ. ವಿಶಾಕ್, ಡಾ. ಅಪೇಕ್ಷ ರಾವ್, ಆಳ್ವಾಸ್ ನಿರಾಮಯದ ನಿರ್ದೇಶಕಿ ಡಾ. ಸುರೇಖಾ ಪೈ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق