ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಎಂ ನೋಡಲು ಮುಂದೆ ಬಂದ ಬಾಲಕನಿಗೆ ಪೋಲಿಸ್ ಸಿಬ್ಬಂದಿಯಿಂದ ಏಟು; ಬಾಲಕನಿಗೆ ಗಾಯ

ಸಿಎಂ ನೋಡಲು ಮುಂದೆ ಬಂದ ಬಾಲಕನಿಗೆ ಪೋಲಿಸ್ ಸಿಬ್ಬಂದಿಯಿಂದ ಏಟು; ಬಾಲಕನಿಗೆ ಗಾಯ

 


ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ನಿತಿನ್ ಎನ್ನುವ ಬಾಲಕನ ತಲೆಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಟೋಪಿಯಿಂದ ಹೊಡೆದಿದ್ದರಿಂದ ಬಾಲಕನಿಗೆ ಗಾಯವಾಗಿ ರಕ್ತ ಸುರಿದಿದೆ.

ಕಾರ್ಯಕ್ರಮ ಆರಂಭವಾಗುವ ಮುನ್ನ, ಈ ಸಮಯದಲ್ಲಿ ವೇದಿಕೆಯ ಪಕ್ಕಕ್ಕೆ ಬಂದ ಬಾಲಕನ ತಲೆಗೆ ಪೊಲೀಸರೊಬ್ಬರು ಟೋಪಿಯಿಂದ ಹೊಡೆದಾಗ ಗಾಯವಾಗಿ ರಕ್ತ ಬಂದಿದೆ.

'ನಾನು ಹೊಡೆದಿಲ್ಲ. ಬಾಲಕನೇ ಇತರೊಡನೆ ಗಲಾಟೆ ಮಾಡಿಕೊಂಡಿದ್ದಾನೆ' ಎಂದು ಆರಂಭದಲ್ಲಿ ಪೊಲೀಸ್‌ ಸಿಬ್ಬಂದಿ ಹೇಳಿದ್ದರು. ಆದರೆ, ಬಳಿಕ 'ಇದು ಆಕಸ್ಮಿಕ ಘಟನೆ' ಎಂದು ಸಮಜಾಯಿಷಿ ನೀಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم