ಉಪ್ಪಿನಂಗಡಿ: ಉಪ್ಪಿನಂಗಡಿ ಗೃಹರಕ್ಷಕ ದಳ ಘಟಕದ ವಾರದ ಕವಾಯತಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ಹಾಗೂ ದ.ಕ.ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಅವರು ಭೇಟಿ ನೀಡಿ ಕವಾಯತು ವೀಕ್ಷಣೆ ಮಾಡಿದರು. ಪುತ್ತೂರು ಘಟಕಾಧಿಕಾರಿ ಅಭಿಮನ್ಯು ಅವರು ಜಿಲ್ಲಾ ಕಮಾಂಡೆಂಟ್‌ರವರಿಗೆ ಗೌರವ ವಂದನೆ ಸಲ್ಲಿಸಿದರು.
ನಂತರ ಸ.ಮಾ. ಶಾಲೆಯ ಸಭಾಂಗಣದಲ್ಲಿ ಉಪ್ಪಿನಂಗಡಿ, ಪುತ್ತೂರು, ಕಡಬ, ಗೃಹರಕ್ಷಕ ದಳದ ಸಂಯುಕ್ತ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತಾನಾಡಿದ ಉಪ್ಪಿನಂಗಡಿ ಪ್ರೊಬೆಷನರಿ ಡಿವೈಎಸ್‌ಪಿ ಧನ್ಯ ನಾಯಕ್ ಅವರು, ವ್ಯಕ್ತಿಯ ಜೀವರಕ್ಷಣೆಗೆ ಪೂರಕವಾದ ರಕ್ತದಾನ ಮಾಡುವ ಮೂಲಕ ಸ್ವತಃ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ರಕ್ತದಾನ ಮಾಡುವ ಎಲ್ಲಾ ಗೃಹರಕ್ಷಕರಿಗೊ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಮಾಂಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ರಕ್ತದಾನ ಮಹತ್ವದ ಬಗ್ಗೆ ಗೃಹರಕ್ಷಕರಿಗೆ ಮಾಹಿತಿ ನೀಡಿದರು. ರಕ್ತದಾನ ಮಾಡಿದ ಎಲ್ಲರಿಗೂ ತಾವು ಬರೆದ 'ರಕ್ತದಾನ ಜೀವದಾನ' ಪುಸ್ತಕವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್, ಉಪ್ಪಿನಂಗಡಿ ಪೋಲಿಸ್ ಠಾಣಾ ಪ್ರೊಬೆಷನರಿ ಉಪ ನಿರೀಕ್ಷಕರಾದ ಅನಿಲ್, ಶಾಲಾ ಮುಖ್ಯ ಶಿಕ್ಷಕಿ ದೇವಕಿ.ಎಂ, ಎಸ್‌ಡಿಎಂಸಿ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ, ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿದರು. ತೇಜಸ್ವಿನಿ ಆಸ್ಪತ್ರೆ ವೈದ್ಯ ವಾಸುದೇವ ಪ್ರಭು ಮತ್ತು ಅವರ ತಂಡ ಪುತ್ತೂರು ಘಟಕಾಧಿಕಾರಿ ಅಭಿಮಣ್ಯು ರೈ, ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತಿರ್ಥೇಶ್, ಉಪ್ಪಿನಂಗಡಿ ಘಟಕಾಧಿಕಾರಿ ರಾಮಣ್ಣ ಆಚಾರ್ಯ ಉಪಸ್ಥಿತರಿದ್ದರು.
ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ ಸ್ವಾಗತಿಸಿ ವಂದಿಸಿದರು. ಉಪ್ಪಿನಂಗಡಿ ಪೋಲಿಸ್ ಠಾಣಾ ಸಿಬ್ಬಂದಿ ಹಾಗೂ ಉಪ್ಪಿನಂಗಡಿ, ಪುತ್ತೂರು, ಕಡಬ, ಗೃಹರಕ್ಷಕರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಪೋಲಿಸ್ ಠಾಣಾ ಪ್ರೊಬೆಷನರಿ Dysp ಧನ್ಯ ನಾಯಕ್ ರವರು ಸ್ವತಃ ರಕ್ತದಾನ ಮಾಡುವ ಮೂಲಕ ಗೃಹರಕ್ಷಕರಿಗೆ ಪ್ರೇರಣೆಯಾದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق