ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಾಯಿ ಮತ್ತು ನವಜಾತ ಶಿಶು ಮೃತ್ಯು

ತಾಯಿ ಮತ್ತು ನವಜಾತ ಶಿಶು ಮೃತ್ಯು




 ಕಲಬುರ್ಗಿ : ತಾಯಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆಯೊಂದು ಕಲಬುರ್ಗಿ ಯ ಜಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.


ಕಲಬುರ್ಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ಕನ್ಯಾಕುಮಾರಿ (23 ವರ್ಷ) ಕಳೆದ ರಾತ್ರಿ ಹೆರಿಗೆ ನೋವು ಪ್ರಾರಂಭವಾಗಿತ್ತು.


ರಾತ್ರಿ 9 ಗಂಟೆಗೆ ಜಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು. 


ರಾತ್ರಿ ಒಂದು ಗಂಟೆ ಸಮಯದಲ್ಲಿ ಹೆರಿಗೆ ನಡೆದಿದ್ದು, ಅದೇ ಸಮಯದಲ್ಲಿ ಮಗು ಮೃತಪಟ್ಟಿದೆ. ಹೆರಿಗೆ ನಂತರ ಅರ್ಧ ಗಂಟೆಯಲ್ಲಿ ತಾಯಿ ಕೂಡ ಸಾವಿಗೀಡಾಗಿದ್ದಾರೆ. 


ಹೆರಿಗೆ ನಂತರ ಕನ್ಯಾಕುಮಾರಿ ಅವರು ಹೊಟ್ಟೆ ನೋವು ಎಂದಿದ್ದರು. ಈ ವೇಳೆಯಲ್ಲಿ ನರ್ಸ್​ಗಳು ಮಾತ್ರೆ ನೀಡಿದ್ದರಂತೆ. ಮಾತ್ರ ಸೇವಿಸಿದ್ದ ಬಳಿಕ ಕನ್ಯಾಕುಮಾರಿ, ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. 


ತಾಯಿ-ಮಗು ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم