ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾರಿಗೆ ಇಲಾಖೆಯ ಪ್ರಮುಖ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸಾರಿಗೆ ಇಲಾಖೆಯ ಪ್ರಮುಖ ಖಾಲಿ ಇರುವ ಹುದ್ದೆಗಳ ನೇಮಕಾತಿ

 


ಬೆಂಗಳೂರು: ಚೆಕ್ ಪೋಸ್ಟ್ ಗಳಲ್ಲಿ ಲಂಚ ಹೆಚ್ಚಾಗಿದ್ದು, ತುಮಕೂರು ಚೆಕ್ ಪೋಸ್ಟ್ ನಲ್ಲಿ ಲಂಚ ಹಾಕಲು ಡ್ರಮ್ ಇಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ವಿಧಾನ ಪರಿಷತ್ ನಲ್ಲಿ ಆರೋಪ ಮಾಡಿದ್ದಾರೆ. ಈ ರೀತಿಯ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಚೆಕ್ಪೋಸ್ಟ್ ಗಳಲ್ಲಿ ಹಸ್ತಾ ವಸೂಲಿಗೆ ಕಡಿವಾಣ ಹಾಕಬೇಕು. ಹಾಗೆ ಖಾಲಿ ಹುದ್ದೆಗಳ ಭರ್ತಿ ಮಾಡಬೇಕು ಎಂದು ಹೇಳಿದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


ರಾಜ್ಯದ 15 ಚೆಕ್ಪೋಸ್ಟ್ ಗಳಲ್ಲಿ 37 ಹುದ್ದೆಗಳು ಇವೆ. ಇವುಗಳಲ್ಲಿ 29 ಹುದ್ದೆ ಖಾಲಿಯಿದ್ದು, ಸಾರಿಗೆ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ 1529 ಹುದ್ದೆ ಖಾಲಿ ಇವೆ. 


ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

0 تعليقات

إرسال تعليق

Post a Comment (0)

أحدث أقدم