ವಿಜಯಪುರ: ಪತ್ನಿ ತನ್ನ ಸಂಬಂಧಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿರುವುದು ತಿಳಿದು ಮನ ನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ವೆಂಕಟೇಶ್ ದ್ವಾರನಹಳ್ಳಿ (25 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಪತ್ನಿಯು ತನ್ನ ದಾಯಾದಿ ಸಹೋದರ ಶ್ರೀಶೈಲ್ ಎಂಬವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅಷ್ಟೇ ಅಲ್ಲದೇ ಆತನೊಂದಿಗೆಯೇ ವಾಸವಾಗಿದ್ದಳು ಎನ್ನಲಾಗಿದೆ.
ಮೃತ ವೆಂಕಟೇಶ್ ತಾಳಿಕೋಟೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನು. ಆದರೆ ಪತ್ನಿ ತಾನು ವೆಂಕಟೇಶ್ ಜೊತೆ ಇರಲ್ಲ, ಪ್ರಿಯಕರ ಶ್ರೀಶೈಲ್ ಜೊತೆಯೇ ಇರುವುದಾಗಿ ಹೇಳಿಕೆ ನೀಡಿದ್ದಳಂತೆ.
ತಾನು ಪ್ರೀತಿಸಿ ವಿವಾಹವಾಗಿದ್ದ ಹೆಂಡತಿ ಈಗ ತನ್ನ ಸಂಬಂಧಿಯೊಂದಿಗೆ ಇರುವುದಾಗಿ ಹೇಳುತ್ತಿರುವುದನ್ನು ಕೇಳಿ ವೆಂಕಟೇಶ್ ಮನನೊಂದಿದ್ದಾನೆ.
ಫೇಸ್ ಬುಕ್ ಲೈವ್ ನಲ್ಲಿ ತನ್ನ ನೋವನ್ನು ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಫೇಸ್ ಬುಕ್ ಲೈವ್ ವಿಡಿಯೋ ನೋಡುತ್ತಿದ್ದಂತೆ ವೆಂಕಟೇಶ್ ನ ಸ್ನೇಹಿತರು ಆತನನ್ನು ಹುಡುಕಿಕೊಂಡು ಬಂದಿದ್ದಾರೆ.
ಆದರೆ ಅಷ್ಟು ಹೊತ್ತಿಗೆ ವೆಂಕಟೇಶ್ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
إرسال تعليق