ಮಂಗಳೂರು: ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಓ) ಶ್ರೀ ಎ.ವಿ. ಶ್ರೀಧರ ಅವರು ಇಂದು ನಿಧನರಾದರು.
ಮಂಗಳೂರಿನಲ್ಲಿ ಮೋಟಾರ್ ವಾಹನ ನಿರೀಕ್ಷಣಾ ಸೇವೆಯಲ್ಲಿದ್ದು, ಆ ಬಳಿಕ ಉಡುಪಿ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಉಡುಪಿಯಲ್ಲಿ ಸಹಾಯಕ ಸಾರಿಗೆ ಅಧಿಕಾರಿಯಾಗಿ ನಿವೃತ್ತರಾದರು.
ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ನಿಧನರಾದರು.
ಮೂಲತಃ ಸಾಗರ ತಾಲೂಕಿನ ಅರಮನೆ ಕೊಪ್ಪದವರಾಗಿದ್ದ ಅವರು, ಪತ್ನಿ ಶ್ರೀಮತಿ ರಮಾ, ಬೆಂಗಳೂರಿನಲ್ಲಿರುವ ಪುತ್ರ ಶರತ್ ಹಾಗೂ ಆಸ್ಟ್ರೇಲಿಯಾದಲ್ಲಿರುವ ಪುತ್ರಿ ಶ್ರೀಮತಿ ಶೃತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق