ರಾಯಚೂರು: ಅಣ್ಣ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾಗಿ ತಂಗಿಯೂ ಸಾವಿಗೀಡಾದ ಘಟನೆಯೊಂದು ತಾಲೂಕಿನ ಹುಣಸಿಹಾಳಹುಡಾದಲ್ಲಿ ಮಂಗಳವಾರ ನಡೆದಿದೆ.
ಹುಣಸಿಹಾಳಹುಡಾದ ನರಸಪ್ಪ ಹೀರಾ (65 ವರ್ಷ) ಅನಾರೋಗ್ಯದಿಂದ ನಗರದ ನವೀನ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಣ್ಣನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ತಂಗಿ ಸಿದ್ದಮ್ಮ (50)ವರ್ಷ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಅಣ್ಣನ ಯೋಗಕ್ಷೇಮ ವಿಚಾರಿಸಲು ಸಿರವಾರದಿಂದ ಬಂದಿದ್ದರು. ಆಸ್ಪತ್ರೆಯಲ್ಲಿ ಅಣ್ಣ ಅಗಲಿದ್ದಾನೆಂಬ ಸುದ್ದಿ ತಿಳಿಯುತ್ತಿದ್ದಂತೆ ಅಣ್ಣನ ಮನೆಯಲ್ಲಿಯೇ ತಂಗಿ ಮೃತಪಟ್ಟಿದ್ದಾರೆ.
ನರಸಪ್ಪ ಹೀರಾ ಇಬ್ಬರು ಪತ್ನಿಯರು, ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದರೆ, ತಂಗಿ ಸಿದ್ದಮ್ಮ ಪತಿ, ಮೂವರು ಪುತ್ರರನ್ನು ಅಗಲಿದ್ದಾರೆ.
إرسال تعليق