ಕಲಬುರ್ಗಿ: ಸೇಡಂ ತಾಲ್ಲೂಕಿನ ಕುರಕುಂಟಾ ಕ್ರಾಸ್ ಬಳಿ ಬೈಕ್‌ನಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದು, ಸಂತ್ರಸ್ತ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ಆನ್‌ಲೈನ್ ಮೂಲಕ ನೀಡಿದ ದೂರನ್ನು ಆಧರಿಸಿ ಸೇಡಂ ಪೊಲೀಸರು ಸಿಮೆಂಟ್ ಕಂಪನಿಯೊಂದರ ಗುತ್ತಿಗೆ ನೌಕರ ನಾಗರಾಜ (26) ವರ್ಷ ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ ಮೇ 24ರಂದು ಅತ್ಯಾಚಾರ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆ ತಕ್ಷಣವೇ ದೂರು ದಾಖಲಿಸಿರಲಿಲ್ಲ.
ಜುಲೈ 28ರಂದು ಮಹಿಳಾ ಆಯೋಗಕ್ಕೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಆಯೋಗವು ಈ ವಿಚಾರವನ್ನು ಸೇಡಂ ಪೊಲೀಸರ ಗಮನಕ್ಕೆ ತಂದಿತ್ತು.
ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯ ಹೇಳಿಕೆಯನ್ನು ಆಧರಿಸಿ ಆ 31ರಂದು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆ ಕಚೇರಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದು, ಸೇಡಂನಿಂದ ಆಟೋ ಮೂಲಕ ಕುರಕುಂಟಾ ಕ್ರಾಸ್ ಬಳಿ ಬಂದಿಳಿದಿದ್ದಾರೆ.
ಸಂಜೆ ಬಸ್ ಇಲ್ಲದ ಕಾರಣ, ರಸ್ತೆಯಲ್ಲಿ ಮಹಿಳೆಯನ್ನು ಕಂಡ ನಾಗರಾಜ ಸಹಾಯ ಮಾಡುವ ನೆಪವೊಡ್ಡಿ, ಆಕೆಯನ್ನು ಬೈಕ್ ಹತ್ತಿಸಿಕೊಂಡಿದ್ದಾನೆ.
ಸ್ವಲ್ಪ ದೂರ ಹೋದ ಬಳಿಕ ಸೇತುವೆ ಬಳಿ ಮಹಿಳೆಗೆ ಚಾಕು ತೋರಿಸಿ, ಹೆದರಿಸಿ ಸೇತುವೆ ಕೆಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿದ್ದರು.
إرسال تعليق