ಬದಿಯಡ್ಕ: ಪೆರ್ಲ ಸಮೀಪದ ಬಣ್ಪುತ್ತಡ್ಕ ಶಾಲೆಯ ನಿವೃತ್ತ ಶಿಕ್ಷಕ, ಯಕ್ಷಗಾನದ ಅಪಾರ ಮಾಹಿತಿ ಸಂಗ್ರಾಹಕರಾದ ತಲೆಂಗಳ ರಾಮಚಂದ್ರ ಭಟ್ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಯಕ್ಷಗಾನದ ವಿಶ್ವಕೋಶ ಆಡಿಯೋ, ವೀಡಿಯೋ, ಮಾಹಿತಿಗಳ ಅಪಾರ ಸಂಗ್ರಹ ಇವರಲ್ಲಿತ್ತು. ಅವರು ಯಕ್ಷಗಾನ, ಕನ್ನಡ ಭಾಷೆಗಳ ಅತೀವ ಅಭಿಮಾನಿಯಾಗಿದ್ದರು.
ಆಪ್ತರ ಬಳಗದಲ್ಲಿ ತಲೆಂಗಳ ರಾಮಚಂದ್ರ ಮಾಸ್ಟ್ರು ಎಂದೇ ಖ್ಯಾತರಾಗಿದ್ದ ಅವರು, ಯಕ್ಷಗಾನ ವಲಯದಲ್ಲಿ ಆಟ ಕೂಟಗಳ ದಾಖಲಾತಿಗಳ ಅಪೂರ್ವ ಸಂಗ್ರಾಹಕರಾಗಿ ಪ್ರಸಿದ್ಧರು. ಇವರ ಸಂಗ್ರಹದಲ್ಲಿ ಅತ್ಯಂತ ಅಪರೂಪವಾದ ಕ್ಯಾಸೆಟ್, ಸಿಡಿಗಳ ಬೃಹತ್ ಸಂಗ್ರಹವಿದೆ. ತಿಟ್ಟು ಭೇದ ಇಲ್ಲ. ಯಾವುದೇ ಹೊಸ ಸಿಡಿ, ಅಡಿಯೋ ಬಿಡುಗಡೆಯಾದರೂ ಅದನ್ನು ಸಂಗ್ರಹಿಸಿ ಇಡುವ ಉತ್ತಮ ಹವ್ಯಾಸ ಇವರದಿತ್ತು. ಆಟ ಕೂಟಗಳು ಎಲ್ಲಿದ್ದರೂ, ತಾನು ನೆಲೆಸಿದ ಪೆರ್ಲ ಸಮೀಪದ ಬಣ್ಪುತ್ತಡ್ಕದಿಂದ ಬಗಲಿಗೊಂದು ಚೀಲ ಹಾಕಿ ಬರುವ ರೂಢಿ ಇವರದು. ಓದುವ ಹವ್ಯಾಸ. ಬಲಿಪರ, ಅಗರಿಯವರ ಕಟ್ಟಾ ಅಭಿಮಾನಿ. ಅಗರಿ ಪ್ರತಿಷ್ಠಾನದಿಂದ ಇವರಿಗೆ ಪ್ರತ್ಯೇಕ ಗೌರವ ಸಂದಿದೆ.
ಅಧ್ಯಾಪಕರಾಗಿ, ನಿವೃತ್ತರಾದ ಮೇಲೂ ಅತ್ಯಂತ ಚಲನಶೀಲ ವ್ಯಕ್ತಿತ್ವದವರಾಗಿದ್ದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق