ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಅಪಘಾತ; ದಂಪತಿ ಸಾವು

ಕಾರು ಅಪಘಾತ; ದಂಪತಿ ಸಾವು

 


ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಪುರ ಗೇಟ್ ಬಳಿ ಕಾರು ಅಪಘಾತದಲ್ಲಿ ದಂಪತಿ ಮೃತಪಟ್ಟಿರುವ ಘಟನೆಯೊಂದು ಶನಿವಾರ ನಡೆದಿದೆ.


ಬೆಂಗಳೂರಿನ ಬಿ.ಎಸ್.ರವಿ (54 ವರ್ಷ), ಜ್ಯೋತಿ (48 ವರ್ಷ) ಮೃತರು. ರವಿ ಅವರು ಕುಟಂಬ ಸಮೇತ ಬೇಟೆರಾಯ ಸ್ವಾಮಿ ದೇವಸ್ಥಾನಕ್ಕೆಂದು ಬೆಂಗಳೂರಿನಿಂದ ಬರುವಾಗ ತಾಲ್ಲೂಕಿನ ಚಿಕ್ಕಪುರ ಗೇಟ್ ಬಳಿ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.


ಜ್ಯೋತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ರವಿ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. 


ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ರವಿ ಅವರ ಮಗ, ಕಾರು ಚಾಲಕ ವಿನಯ್‌ನ ಬಲಗೈಗೆ ಗಾಯವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

0 تعليقات

إرسال تعليق

Post a Comment (0)

أحدث أقدم