ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳಗಾವಿ: 2 ವರ್ಷದ ಮಗು ಬೋರ್ ವೆಲ್ ಗೆ ಬಿದ್ದು ಸಾವು, ಅಪ್ಪನೇ ಕೊಂದನೆಂದು ಅಜ್ಜಿಯ ಆರೋಪ

ಬೆಳಗಾವಿ: 2 ವರ್ಷದ ಮಗು ಬೋರ್ ವೆಲ್ ಗೆ ಬಿದ್ದು ಸಾವು, ಅಪ್ಪನೇ ಕೊಂದನೆಂದು ಅಜ್ಜಿಯ ಆರೋಪ

 


ಬೆಳಗಾವಿ: ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಶುಕ್ರವಾರ ಎರಡು ವರ್ಷದ ಮಗು ಬೋರ್ ವೆಲ್‌ನಲ್ಲಿ ಬಿದ್ದು ಮೃತಪಟ್ಟ ಘಟನೆಗೆ ಆತಂಕಕಾರಿ ತಿರುವು ದೊರೆತಿದ್ದು, ಮಗುವಿನ ತಂದೆಯೇ ಅದನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.


ಮಗುವಿನ ತಂದೆ ಸಿದ್ಧಪ್ಪನೇ ಮಗುವನ್ನು ಕೊಲೆ ಮಾಡಿ ಬೋರ್‌ವೆಲ್‌ಗೆ ಹಾಕಿದ್ದಾನೆ ಎಂದು ಮಗುವಿನ ಅಜ್ಜಿ  ಸರಸ್ವತಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಅಲಕನೂರ ಗ್ರಾಮದ ಶರತ್ ಹಸರೆ ಎಂಬವರ ಮಗು ಆಟವಾಡುತ್ತಾ ನಾಪತ್ತೆ ಆಗಿತ್ತು. ಈ ಬಗ್ಗೆ ಮಗುವಿನ ತಂದೆ ಸಿದ್ದಪ್ಪ ಹಾರೂಗೇರಿ ಠಾಣೆಯಲ್ಲಿ ದೂರು ನೀಡಿದ್ದ.


ಶನಿವಾರ ಮಧ್ಯಾಹ್ನ ಬೋರ್ ವೆಲ್ ಹತ್ತಿರ ಹೋದಾಗ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.


ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮಗುವನ್ನು ಮೇಲೆತ್ತಿದರು. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು.


ಈ ಬೋರ್ ವೆಲ್ ಕೊರೆಯಿಸಿದಾಗ ನೀರು ಹತ್ತಿರಲಿಲ್ಲ. ಹೀಗಾಗಿ ಇದು ನಿಷ್ಕ್ರಿಯಗೊಂಡಿತ್ತು. ಆದರೂ ಅದನ್ನು ಮುಚ್ಚಿರಲಿಲ್ಲ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم