ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಮಹಿಬೂಬಿಯಾ ಕಾಲೊನಿಯ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6 ವರ್ಷ), ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.
ಕಳೆದ ವಾರ ಜ್ವರ ಕಾಣಿಸಿಕೊಂಡಾಗ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಖಾಸಗಿ ಆಸ್ಪತ್ರೆಯಲ್ಲೂ ತಪಾಸಣೆ ಮಾಡಿಸಿದ್ದರು.
ಪ್ಲೇಟ್‍ಲೆಟ್ ಗಣನೀಯ ಇಳಿಮುಖವಾಗುವುದು ಕಂಡು ಬಂದಿತ್ತು. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಗುರುವಾರ ಮಗುವನ್ನು ದಾಖಲಿಸಲಾಗಿತ್ತು.
'ಇದು ಶಂಕಿತ ಡೆಂಗಿ ಪ್ರಕರಣ ಇರಬಹುದು. ಈ ಬಗ್ಗೆ ವರದಿಗಳನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಬೇಕಿದೆ' ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ತಿಳಿಸಿದರು.
إرسال تعليق