ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಡದೋಣಿ ಮಗುಚಿ ಇಬ್ಬರು ಮೀನುಗಾರರ ಶವ ಪತ್ತೆ

ನಾಡದೋಣಿ ಮಗುಚಿ ಇಬ್ಬರು ಮೀನುಗಾರರ ಶವ ಪತ್ತೆ

 




ಬೈಂದೂರು (ಉಡುಪಿ): ತಾಲ್ಲೂಕಿನ ಪಡುವರಿ ಗ್ರಾಮದ ತಾರಾಪತಿಯಲ್ಲಿ ಶುಕ್ರವಾರ ನಾಡದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಪತ್ತೆಯಾಗಿದೆ.


'ಜೈ ಗುರೂಜಿ' ದೋಣಿ ಮಾಲೀಕ ಚರಣ್‌ರಾಜ್ ಖಾರ್ವಿ (25)ವರ್ಷ ಅವರ ಶವ ಅಮ್ಮನವರ ತೊಪ್ಲು ಬಳಿ ಹಾಗೂ ಅಣ್ಣಪ್ಪ ಖಾರ್ವಿ (40 ವರ್ಷ) ಅವರ ಶವ ಕರ್ಕಿಕಳಿ ಬಳಿ ಸಿಕ್ಕಿದೆ.


ಶುಕ್ರವಾರ ಮೀನುಗಾರಿಕೆ ಮುಗಿಸಿ ಅಳ್ವೆಕೋಡಿಗೆ ಬರುವಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ದೋಣಿ ಮಗುಚಿತ್ತು. ಅದರಲ್ಲಿದ್ದ 7 ಮೀನುಗಾರರ ಪೈಕಿ ಇಬ್ಬರು ನಾಪತ್ತೆಯಾಗಿದ್ದರು. 


ವಿಜೇತ್, ಪ್ರವೀಣ್, ಸಚಿನ್, ಸುಮಂತ್, ವಾಸುದೇವ ಖಾರ್ವಿ ಅವರನ್ನು ಕರಾವಳಿ ಕಾವಲು ಪಡೆಯ ಪೋಲಿಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم