ರಾಯಚೂರು ; ಮೊಹರಂ ಕೊನೆಯ ದಿನವಾದ ಇಂದು ಬೆಳಿಗ್ಗೆ ಹಿರೇದೇವರ ಪಂಜಾ ಮೆರವಣಿಗೆ ವೇಳೆಯಲ್ಲಿ, ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಮೊಹರಂ ಪಂಜಾ ಮೆರವಣಿಗೆ ಹೋಗುವ ವೇಳೆಯಲ್ಲಿ, ವಿದ್ಯುತ್ ಅವಘಡ ಸಂಭವಿಸಿ ಹುಸೇನಸಾಬ ದೇವರಮನಿ (50) ವರ್ಷ ಹಾಗೂ ಹುಲಿಗೆಮ್ಮ (18) ವರ್ಷ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಳಗ್ಗೆ 4 ರಿಂದ 5 ಗಂಟೆಯಲ್ಲಿ ಹಿರೇದೇವರು ಸವಾರಿ ಮಾಡುವ ವೇಳೆಯಲ್ಲಿ, ಮೇಲೆ ಹಾದು ಹೋಗಿದ್ದ ವಿದ್ಯುತ್ ವೈರ್ ದೇವರಿಗೆ ತಗುಲಿದ್ದರಿಂದ ಈ ದುರಂತ ನಡೆದಿದೆ.
ಕೂಡಲೇ ಲಿಂಗುಸುಗೂರು ಆಸ್ಪತ್ರೆಗೆ ದಾಖಲಿಸುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿದ್ದಾರೆ.
إرسال تعليق