ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯ ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ರಾಷ್ಟ್ರಪತಿಗಳು ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆಯಾಗಿದ್ದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಷ್ಟ್ರಪತಿ ಭವನ ಹೇಳಿಕೆ ನೀಡಿದೆ.
75 ವರ್ಷದ ರಾಮನಾಥ್ ಕೋವಿಂದ್ ಕಳೆದ ಮಾರ್ಚ್ ನಲ್ಲಿ ಎದೆನೋವಿಗೊಳಗಾಗಿದ್ದರು. ಇದಾದ ನಂತರ ಅವರು ಆಗಾಗ ಆರೋಗ್ಯ ತಪಾಸಣೆಗೊಳಗಾಗುತ್ತಿದ್ದಾರೆ.
ಇದೀಗ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
إرسال تعليق