ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿಗೆ ವಿದ್ಯುತ್ ತಂತಿ ತಗುಲಿ ಕ್ಲೀನರ್ ಸಾವು

ಲಾರಿಗೆ ವಿದ್ಯುತ್ ತಂತಿ ತಗುಲಿ ಕ್ಲೀನರ್ ಸಾವು

 


ಚಿಕ್ಕಮಗಳೂರು : ಲಾರಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಲಾರಿಯಲ್ಲಿದ್ದ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.


ಮೂಲತಃ ತರೀಕೆರೆ ನಿವಾಸಿಯಾದ ರಫೀಕ್ (35 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದರೆ, ಹತ್ತು ಚಕ್ರಗಳನ್ನು ಹೊಂದಿದ್ದ ಲಾರಿ ಬಾಳೆಹೊಳೆ ಪಡೀಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ತಂತಿ ತಗುಲಿದೆ ಈ ವೇಳೆಯಲ್ಲಿ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಸ್ಥಳಕ್ಕೆ ಕಳಸ ಪಿಎಸ್‌ಐ ಹರ್ಷವರ್ಧನ್ ಹಾಗೂ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರಾದ ಶರೀಫ್ ತುರ್ತಾಗಿ ತೆರಳಿ ಶವ ಕಳಸ ಆಸ್ಪತ್ರೆಗೆ ಕರೆದೊಯ್ದರು.

0 تعليقات

إرسال تعليق

Post a Comment (0)

أحدث أقدم