ದೇವನಹಳ್ಳಿ; ದ್ವಿಚಕ್ರವಾಹನವೊಂದರಲ್ಲಿ ದೇವನಹಳ್ಳಿ ರಾಣಿ ಸರ್ಕಲ್‌ನಿಂದ ಆವತಿಯವರೆಗೂ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನ ಸವಾರನ ವರ್ತನೆಯಿಂದ ಬೇಸತ್ತಿದ್ದ ಕಾರು ಚಾಲಕರೊಬ್ಬರು, ಸವಾರನನ್ನು ಅಡ್ಡಗಟ್ಟಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆಯೊಂದು ನಡೆದಿದೆ.
ಹೋಬಳಿಯ ಆವತಿಯ ಕೆನರಾ ಬ್ಯಾಂಕಿನ ಹತ್ತಿರದಲ್ಲಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿದ್ದು ಸಂಪೂರ್ಣವಾಗಿ ಸುಟ್ಟುಹೋಗಿದೆ.
ಆಂಧ್ರಪ್ರದೇಶದ ಕಡಪ ಮೂಲದ ರತ್ನಮಯ್ಯ ಅವರಿಗೆ ಸೇರಿದ ಬೈಕ್ ಇದಾಗಿದೆ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಹಾಗೂ ಕಾರು ಚಾಲಕ ಪರಾರಿಯಾಗಿದ್ದಾರೆ.
'ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ' ಎಂದು ವಿಜಯಪುರ ಠಾಣೆಯ ಪಿಎಸ್‌ಐ ನಂದೀಶ್ ತಿಳಿಸಿದರು.
إرسال تعليق