ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಡೆ ಪಂಚ್ - ಹೀಗೊಂದು ಪ್ರೇಮ ಕವಿತೆ

ಸಂಡೆ ಪಂಚ್ - ಹೀಗೊಂದು ಪ್ರೇಮ ಕವಿತೆ


ಆತನ ಕತೆ ಕವನಗಳಿಗೆ ಆಕೆ ಮನ ಸೋತಿದ್ದಳು... ದಿನಾ ಅವನೊಂದಿಗೆ ಚಾಟಿಂಗ್ 

ನಡೆಯುತಿತ್ತು. ಅಂದು ತನ್ನ ಬಗ್ಗೆ ಒಂದು ಪ್ರೇಮ ಕವನ ಬರೆಯುವಂತೆ ಕೇಳಿಕೊಂಡಿದ್ದಳು. ಆತ ಹೀಗೆ ಬರೆದ...


❤️❤️ ಓ ಪ್ರಿಯೆ ನಿನ್ನ ಕತ್ತು ಹಿಡಿದು ಕೊಳ್ಳಲೆ?,

❤️ ಮುಖಕ್ಕೆ ಮುತ್ತು ಕೊಟ್ಟು 

ಗಟ್ಟಿಯಾಗಿ ತಬ್ಬಿಕೊಳ್ಳಲೇ? ❤️❤️

❤️ ಹೃದಯ ಹೊಡೆಯುವುದ ಕೇಳಿಸಿ ಕೊಳ್ಳಲೇ?

❤️ ಒಟ್ಟಲ್ಲಿ ನಿನ್ನಲ್ಲಿ ನಾ ಸೇರಿ ಕೊಳ್ಳಲೇ?...❤️❤️


ಕವನ ಓದಿದ ಹುಡುಗಿ ಬ್ಲಾಕ್ ಮಾಡಿದ್ದಳು ಅವನನ್ನು. ಅವನಿಗೂ ಆಶ್ಚರ್ಯ ಇದು ಹೀಗೇಕಾಯಿತು ಎಂದು, ಮತ್ತೆ ಸೆಂಟ್ ಮೆಸೇಜ್ ನೋಡಿದರೆ ಎಡವಟ್ಟಾಗಿದ್ದು ಗೊತ್ತಾಗಿತ್ತು. ಡಿಕ್ಷನರೀ ಆನ್ ಆಗಿದ್ದು ನೋಡಿರಲಿಲ್ಲ ಕವನ ಹೀಗೆ ಹಳಿತಪ್ಪಿತ್ತು...


ಓ ಪ್ರಿಯೆ, ನಿನ್ನ ಕತ್ತು ಹಿಡಿದು ಕೊಲ್ಲಲೇ?

ಮುಖಕ್ಕೆ ಮುತ್ತು ಕೊಟ್ಟು ಗಟ್ಟಿಯಾಗಿ ತಬ್ಬಿ ಕೊಲ್ಲಲೇ?

ಹೃದಯ ಹೊಡೆಯುವುದ ಕೇಳಿ ಕೊಲ್ಲಲೇ?

ಒಟ್ಟಿಗೆ ನಿನ್ನ ನಾ ಸೇರಿ ಕೊಲ್ಲಲೇ?

*****

ಇನ್ನು ಇದ ಓದಿದ ಹುಡುಗಿಗೆ ಹೇಗಾಗಿರಬೇಡ?... ಒಂದು ಪ್ರೇಮ ಪತ್ರದಲ್ಲೇ ಇಷ್ಟೊಂದು ಬಾರಿ ಕೊಂದರೇ ಇನ್ನು ಹುಡುಗಿ ಬ್ಲಾಕ್ ಮಾಡದಿರಲು ಸಾಧ್ಯವೇ?


ನೀತಿ: ಪ್ರೇಮಪತ್ರ ಕಳಿಸುವ ಮೊದಲು 3 ಬಾರಿ ಓದಿ ನೋಡಿ 😄


ಪಂಚ್:  ಡಾ.ಶಶಿಕಿರಣ್ ಶೆಟ್ಟಿ 

ಉಡುಪಿ,  9945130630



0 تعليقات

إرسال تعليق

Post a Comment (0)

أحدث أقدم