ಉಡುಪಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶ ನೀಡಿದ್ದಾರೆ.
ಅವರ ಸಂದೇಶ ಹೀಗಿದೆ:
ಅಂತಾರಾಷ್ಟ್ರೀಯ ಒಲಂಪಿಕ್ಸ್ ನಲ್ಲಿ ನಮ್ಮದೇಶದ ಹೆಮ್ಮೆಯ ಕ್ರೀಡಾಪಟು ನೀರಜ್ ಚೋಪ್ರಾ ಅವರು ಚಿನ್ನ ಗೆದ್ದಿರುವ ವಿಷಯ ತಿಳಿದು ಅತೀವ ಸಂತಸವಾಗಿದೆ. ಅವರ ಈ ಸಾಧನೆಗೆ ಅಭಿನಂದನೆಗಳು ಚೋಪ್ರಾ ಅವರ ಈ ಸಾಧನೆ ಅದಕ್ಕಾಗಿ ಅವರು ಪಟ್ಟ ಶ್ರಮ ಎಲ್ಲವೂ ದೇಶದ ಯುವಕರಿಗೆ ಪ್ರೇರಣೆಯಾಗಲಿ, ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉನ್ನತ ಸಾಧನೆಗಳು ದಾಖಲಿಸುವಂತಾಗಲು ಚೋಪ್ರಾ ಅವರ ಈ ಗೆಲುವು ಸ್ಪೂರ್ತಿಯಾಗಲಿ. ಶ್ರೀ ಕೃಷ್ಣ ಮುಖ್ಯಪ್ರಾಣರು ಈ ಬಾರಿಯ ಒಲಂಪಿಕ್ಸ್ ನಲ್ಲಿ ವಿಜೃಂಭಿಸಿದ, ದೇಶದ ಕೀರ್ತಿ ಬೆಳಗಿದ ಎಲ್ಲ ಕ್ರೀಡಾಳುಗಳನ್ನೂ ವಿಶೇಷವಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಪೇಜಾವರ ಮಠ ಉಡುಪಿ ಮೊಕ್ಕಾಮ್: ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق