ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ಕಚೇರಿಯಲ್ಲಿ ಶುಕ್ರವಾರದಂದು (ಜು.6) ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೃಹರಕ್ಷಕರಿಗೆ ಅಪಘಾತ ಸಂದರ್ಭದಲ್ಲಿ ಮತ್ತು ಆಕಸ್ಮಿಕ ವಿಪತ್ತಿನ ಸಮಯದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಪ್ರಥಮ ಚಿಕಿತ್ಸೆ ಜೀವರಕ್ಷಣೆ ಎಂಬ ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು.
ಈ ಶಿಬಿರದಲ್ಲಿ ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾದ ತೀರ್ಥೆಶ್, ಗೃಹರಕ್ಷಕರಾದ ರಾಕೇಶ್ ಮತ್ತು ಶ್ರೀಲತಾ, ಸುಬ್ರಹ್ಮಣ್ಯ ಘಟಕದ ಗೃಹರಕ್ಷಕಿಯರಾದ ದುರ್ಗಾವತಿ, ದಿವ್ಯ ಲಕ್ಷ್ಮೀ, ಹೇಮಲತಾ, ವಿಮಲ ಇವರುಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق