ಹೌದ್ ಮರಾಯ್ರೆ, ನಮ್ ಕುಂದಾಪ್ರ ಇತ್ತಲ್ಲಾ ಈ ಇಂಗ್ರೂಟಿ ಮಾತಾಡೋ ಬ್ರಿಟೀಷರ ಬಾಯಲ್ ಕೂಂಡಾಪುರ್ ಆಯ್ ಸರ್ಕಾರಿ ದಾಖಲಿಲ್ಲೂ ಕೂಂಡಾಪುರ್ ಆಯ್ ಇದ್ದಿತ್. ಕುಂದಾಪುರ ಅಂಬು ಅಷ್ಟ್ ಚೆಂದದ್ ಹೆಸ್ರು ಬ್ರಿಟೀಷರ ಬಾಯಲ್ ಲಗಾಡಿ ಹೋದಾಗ, ಅದನ್ನ ಪುನಃ ಕುಂದಾಪುರ ಅಂದೇಳಿ ಆಪುಕ್ಕೆ ಕಾರಣ ಆದವ್ರು ಐರೋಡಿ ಶಂಕರನಾರಾಯಣ ಹೆಬ್ಬಾರ್ ಅಥವಾ ಎಎಸ್ಎನ್ ಹೆಬ್ಬಾರ್. ಹೌದ್ ಇದಕ್ಕೆ ನಮ್ ಹೆಬ್ಬಾರ್ರ ಹೋರಾಟಕ್ಕೆ ದೊಡ್ ನಮಸ್ಕಾರ ಹಾಕುಕೇ. ಯಾಕ್ ಗೊತ್ತಾ ಒಂದ್ ಹೆಸರು ಸರಕಾರಿ ದಾಖಲೆಲಿ ಸರಿ ಮಾಡುದ್ ಇತ್ತಲ್ಲಾ ಅದ್ ಸುಲಭದ ಕೆಲಸ ಅಲ್ಲಾ.
ವಕೀಲರಾಯಿದ್ ನಮ್ಮ ಹೆಬ್ಬಾರ್, 1981ರಲ್ಲಿ ಸರಕಾರಿ ದಾಖಲೆಗಳಲ್ಲಿ ಕೂಂಡಪೂರ್ ಹೋಯ್, ಕುಂದಾಪುರ ಆಯ್ತ್. ಅದಕ್ಕೆ ಹೆಬ್ಬಾರ ತಯಾರಿ ಶುರು ಮಾಡದ್ ಮಾತ್ರ 1975ರಂಗೆ, ವಕೀಲರಾದ ಹೆಬ್ಬಾರ್ರು ತಮ್ಮ ಲೆಟರ್ ಹೆಡ್ನಲ್ಲಿ ಕುಂದಾಪುರ ಅಂತ ಬರ್ಕಂಡ್ರು. ಕಡೆಗೆ ಕುಂದಾಪುರದಲ್ಲಿ ಜೇಸಿ ಸಂಸ್ಥೆ ಸ್ಟಾರ್ಟ್ ಮಾಡಿದಾಗ ಅದಕ್ಕೆ ಜೆಸಿಐ ಕುಂದಾಪುರ ಅಂದೇಳಿಯೇ ಶುರು ಮಾಡ್ರ್. ಕುಂದಾಪುರ ಪುರಸಭೆಲ್ಲೂ ಕೂಡ ಕುಂದಾಪುರ ಅಂದೇಳಿ ಮಾಡ್ಕ, ಅಂದೇಳಿ ಮನವಿ ಮಾಡ್ರು. ಅಲ್ಲೂ ಕೂಡ ಒಪ್ಗಿ ಸಿಕ್ತ್. ಅದು ಸರ್ಕಾರಕ್ಕೂ ಹೊಯ್ತ್. ಆದ್ರೆ ಅದ್ ಅಲ್ಲೆ ಮಕಾಡೆ ಮನಿಕಂತ್.
ಕಡಿಗ್ ಹೆಬ್ಬಾರ್ ಕನ್ನಡ ಸಂಘ ಮತ್ತ್ ಕನ್ನಡ ಭಾರತಿಯ ಅಧ್ಯಕ್ಷ ಆಯಿದ್ದಿರ್. ಇದೆ ಇಪ್ಪು ಛಾನ್ಸ್ ಅಂದೇಳಿ ಹೆಬ್ಬಾರ್ ಕೂಂಡಪುರ್ ಕುಂದಾಪುರ ಆಯ್ಕ್ ಅಂದೇಳಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿರ್. ಈಗ ಸರ್ಕಾರಕ್ಕೆ ಜೀವ್ ಬಂತ್ ಕಾಣಿ. ಸರ್ಕಾರದಿಂದ ಉತ್ತರ ಬಂತು. ಕೂಂಡಪುರ್ ಕುಂದಾಪುರ ಮಾಡ್ಕಾರೆ. ನಿಮ್ ಹತ್ರ ಎಂತ ದಾಖಲಿ ಇತ್ ಅಂದೇಳಿ ಕೇಂಡ್ರ. ಇಷ್ಟ್ ಸಿಕ್ರೆ ಸಾಕ್ ಅಂದೇಳಿ ಕಾಯ್ತಿದ್ದ ಹೆಬ್ಬಾರ್, ಸೀದಾ ತಮ್ಮ ಹತ್ರ ಇದ್ ದಾಖಲೆ ಎಲ್ಲಾ ಒಟ್ ಹಾಕ್ರ. ತಮ್ಮ ಅಪ್ಪಯ್ಯನ ಕಾಲದಂಗೆ ಇದ್ದ ನ್ಯಾಯಾಲಯದ ತೀರ್ಪು ಪ್ರತಿಗಳನ್ನು. ಕುಂದಾಪುರ ಜನರ ಹೆಸರಿನ ಇನಿಶಿಯಲ್ನಲ್ಲಿ ಕುಂದಾಪುರ ಅಂಬುದಕ್ಕೆ ಸಾಕ್ಷಿ ಆಯಿ "ಕೆ" ಎಂಬ ಅಕ್ಷರ ಇತ್ ಅಂದೇಳಿ ಇಪ್ಪು ಸಾಕ್ಷಿಗಳನ್ ಒಟ್ಟಾಕಿ ಕೊಟ್ರ್. ಅಂತೂ ಹೆಬ್ಬಾರ್ ಕೊಟ್ ಸಾಕ್ಷಿ ಎಲ್ಲಾ ಸರ್ಕಾರಕ್ಕೆ ಒಪ್ಪಿಗೆ ಆಯ್ 11-09-1981ರಂಗೆ ಕೂಂಡಪುರ್ ಹೊಯ್ ಕುಂದಾಪ್ರ ಆಯ್ತ್.
ಬ್ರಿಟೀಷರ ಕಾಲದ ಪಳೆಯುಳಿಕೆ ಅಂತ ಇನ್ನೂ ಕೆಲವು ಸಂಸ್ಥೆಗಳಲ್ಲಿ ಕೂಂಡಪುರ್ ಅಂದೇಳಿ ಇತ್ ನೀವು ಕಂಡಿಪ್ಕು ಸಾಕ್. ಎಂತದೇ ಆಯ್ಲಿ ಹೆಬ್ಬಾರ್ ಈ ಹೋರಾಟವನ್ನು ವಿಶ್ವ ಕುಂದಾಪ್ರ ಕನ್ನಡ ದಿನದ್ ಸಂದ್ರಭ ನೆನುಕ್ ಭಾರಿ ಖುಷಿ ಆತ್.
ಇದ್ರ ಬಗ್ಗೆ ನಿಮ್ಮ ಅಭಿಪ್ರಾಯ್ ಎಂತ ಅಂದೇಳಿ ಬರೀನಿ ಅಕಾ.
-ಹರೀಶ್ ಕಿರಣ್ ತುಂಗ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق