ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆದಿತ್ಯ ಐತಾಳ್ ಕೆ., ಸಂದೀಪ್ ಕಾಮತ್ ಡಿ., ವರುಣ್ ಮತ್ತು ವಿಜೇತ್ ಕುಮಾರ್ ಅವರು ವಿಭಾಗದ ಸಹಪ್ರಾಧ್ಯಾಪಕ ಡಾ. ಅನಂತಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ "ವರ್ಸಟೈಲ್ ರೂಟ್ ವೆಜಿಟೇಬಲ್ ಹಾರ್ವೆಸ್ಟರ್" ಎನ್ನುವ ಯಂತ್ರವನ್ನು ಆವಿಷ್ಕರಿಸಿದ್ದು, ಕೃಷಿ ಕ್ಷೇತ್ರದಲ್ಲಿ ಅದು ಬಹೂಪಯೋಗಿ ಯಂತ್ರವಾಗಿ ಪರಿಣಮಿಸಲಿದೆ.
ಈ ಯಂತ್ರವು ಏಕಕಾಲದಲ್ಲಿ ಆಲೂಗಡ್ಡೆಯಂತಹ ಗಿಡಗಳನ್ನು ಕತ್ತರಿಸಿ ಗಡ್ಡೆಗಳನ್ನು ಅಗೆದು ಸಾರಣಿಸಿ ಸಂಗ್ರಹಿಸುವ ಯಂತ್ರವಾಗಿರುತ್ತದೆ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಅತ್ಯುತ್ತಮ ಪ್ರಾಜೆಕ್ಟ್ ಗಳಲ್ಲಿ ಆಯ್ಕೆಗೊಂಡಿದ್ದು ಅದರಿಂದ ಆರ್ಥಿಕ ಸಹಾಯವೂ ಲಭಿಸಿದೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್ ಚಿಪ್ಳೂಂಣ್ಕರ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ ಕರಿಂಕ ಹಾಗೂ ಇತರ ಬೋಧಕ ಹಾಗೂ ಬೋಧಕೇತರ ವರ್ಗ ವಿದ್ಯಾರ್ಥಿಗಳ ಈ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق