ಕ್ಲಬ್ ಹೌಸ್ ಎಂಬ ಹೊಸದೊಂದು ಆ್ಯಪ್. ಅದರ ಬಗ್ಗೆ ಸ್ವಲ್ಪ ಅಭಿಪ್ರಾಯ ವಿನಿಮಯವಾದರೆ ಒಳ್ಳೆಯದನ್ನಿಸುತ್ತದೆ. ಅದರೊಳಗೆ ಹೊಕ್ಕವರಿದ್ದರೆ ಅಭಿಪ್ರಾಯ ಹೇಳಿ.
ಕೆಲವರು ಪ್ರೋತ್ಸಾಹಿಸಿದುದರಿಂದ ನಾನು ಅದರೊಳಗೆ ನಾಲ್ಕು ದಿನ ಮೊದಲು ಹೊಕ್ಕಿದ್ದೇನೆ.
ನನ್ನ ಅನುಭವ ತುಂಬಾ ನೀರಸ. ಕೆಲವೊಮ್ಮೆ ಮಾತುಗಳು ಏನೂ ಕೇಳುವುದಿಲ್ಲ. ಕೆಲವೊಮ್ಮೆ ವಿಷಯಾಂತರವಾಗುತ್ತದೆ.
ಹೊಸಬನಾದ ಕಾರಣ ಅದರಲ್ಲಿ ಬಾಗಿಲು ತೆರೆದಿಟ್ಟ ಹಲವು ಕೋಣೆಗಳಿಗೆ ಹೊಕ್ಕು ಹೊರಬಂದಿದ್ದೆ.
ಕೆಲವು ಕೋಣೆಗಳ ಅವಸ್ಥೆ ನೋಡಿ ಅಸಹ್ಯವಾಯಿತು. ಕೋಣೆಯ ಹೊರಗಿನ ಬೋರ್ಡು ಆಕರ್ಷಕವಾಗಿರುತ್ತದೆ. ನಾನು ಹೊಕ್ಕುದೊಂದು ತಮಿಳರ ಕೋಣೆಯಾಗಿತ್ತು.
ಒಳ ಹೊಕ್ಕು ಮಾತು ಕೇಳಿದಾಗ ಗಾಬರಿ ಆಯಿತು. ಅಲ್ಲಿ ಮುಕ್ತವಾಗಿ ಕಾಮಕೇಳಿಯ ಬಗ್ಗೆ ಚರ್ಚೆ ಆಗುತ್ತಿತ್ತು. ಹೆಣ್ಣು ಗಂಡು ಭೇಧವಿಲ್ಲದೆ ಅಶ್ಲೀಲವಾಗಿ ಮಾತನಾಡುತ್ತಿದ್ದರು. ನಾನು ಹೊರಡುತ್ತಿದ್ದಂತೆ ನಿರೂಪಕಿ ನನಗೆ ಸ್ವಾಗತ ಕೋರಿ ಏನಾದರೂ ಮಾತನಾಡಿ ಎಂದು ಹೇಳಿದಳು. ನಾನು ಏನೂ ಮಾತನಾಡದೆ ಹೊರಗೆ ಬಂದಿದ್ದೆ.
ಈಗಾಗಲೆ ಬ್ಲೂ ಫಿಲ್ಮ್ ಗಳ ಹಾವಳಿಯಿಂದ ದಾರಿ ತಪ್ಪುತ್ತಿರುವ ಯುವಜನತೆಯನ್ನು ಇನ್ನಷ್ಟು ನೈತಿಕ ಅಧಃ ಪತನಕ್ಕೆ ತಳ್ಳಲು ಇದೊಂದು ಮಾಧ್ಯಮವಾಗಬಹುದೇ?
ಒಳ್ಳೆಯ ವಿಷಯ ಇರುವ ಕೋಣೆಗೆ ಮಾತ್ರ ಹೋಗಿ ಎನ್ನಬಹುದು. ಆದರೆ ನಾನು ಹೊಕ್ಕು ಹೊರಟ ಕೋಣೆಗಳಲ್ಲಿ ಉತ್ತಮ ವಿಷಯ ಇರುವ ಕೋಣೆಗಳಲ್ಲಿ ಎರಡು ಮೂರು ಕೋಣೆಗಳು ಬಿಟ್ಟರೆ ಉಳಿದವುಗಳಲ್ಲಿ ಸಭಿಕರೇ ಇರಲಿಲ್ಲ. ಮುಕ್ತವಾಗಿ ಮಾತನಾಡುವ ಕೋಣೆಗಳು ಮಾತ್ರ ತುಂಬಿ ತುಳುಕುತ್ತಿತ್ತು. ಇದರಲ್ಲಿ ಹೆಣ್ಣು ಗಂಡು ಭೇಧವಿರಲಿಲ್ಲ. ಪ್ರಸಿದ್ಧ ಲೇಖಕರೊಬ್ಬರು ಬರೆದ "ಸೆಕ್ಸ್ ಸೆಲ್ಸ್" ಅನ್ನುವ ಮಾತು ನೆನಪಾಯಿತು. ಅಲ್ಲಿರುವವರು ಯಾವ ಹತೋಟಿಯೂ ಇಲ್ಲದೆ ಮುಕ್ತವಾಗಿ ಮಾತನಾಡುತ್ತಿದ್ದರು.
ನಾನಂತೂ ಕ್ಲಬ್ ಹೌಸ್ ಎಂಬ ಈ ಕಟ್ಟಡಕ್ಕೆ ಪ್ರವೇಶಿಸದೆ ಇರುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಎರಡು ದಿನದಲ್ಲೇ ಹೊಂದಿದ್ದೇನೆ. ವಿಷಯ ಮಂಡನೆ ಚರ್ಚೆ ಇಲ್ಲೂ ಮಾಡ ಬಹುದು. ವಾಟ್ಸ್ ಏಪಲ್ಲೂ ಅಂತಹಾ ಗ್ರೂಪ್ ಇರಲೂ ಬಹುದು.ನನಗೆ ತಿಳಿಯದು. ಆದರೆ ಸಾಮಾನ್ಯವಾಗಿ ಅಂತಹಾ ಗ್ರೂಪುಗಳಿಗೆ ಮುಕ್ತ ಪ್ರವೇಶ ಇರುವುದಿಲ್ಲ.
ಕ್ಲಬ್ ಹೌಸಿನ ಕೋಣೆಗಳ ಬಾಗಿಲು ಸಂಪೂರ್ಣ ತೆರೆದಿರುತ್ತದೆ. ಯಾರೂ ಪ್ರವೇಶಿಸಬಹುದು. ಯಾರೋ ತಿಳಿಯದೆ ಒಳ ಹೊಕ್ಕವನೂ ಆಕರ್ಷಿಸಲ್ಪಡಬಹುದಲ್ಲ.
ನಾನು ಸುಮ್ಮನೆ ಕೋಣೆಗಳನ್ನು ಹೊಕ್ಕು ಹೊರಗೆ ಬಂದವ. ನನಗೆ ಈ ಕ್ಲಬ್ ಹೌಸ್ ಬಗ್ಗೆ ಜ್ಞಾನ ಏನೇನೂ ಇಲ್ಲ. ತಿಳಿದವರಿದ್ದರೆ ಇದರ ಬಗ್ಗೆ ಬೆಳಕು ಚೆಲ್ಲಿ. ಯಾಕೆಂದರೆ ಈ ಕ್ಲಬ್ ಹೌಸ್ ಒಂದು ಟ್ರೆಂಡ್ ಆಗಿ ಬಿಟ್ಟಿದೆ.
-ಎಡನಾಡು ಕೃಷ್ಣ ಮೋಹನ ಭಟ್ಟ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق