ವಿಟ್ಲ: ಜಿಲ್ಲಾ ಪೌರ ರಕ್ಷಣಾ ಪಡೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ವಿಟ್ಲ ಹಾಗೂ ರೋಟರಿ ಕ್ಲಬ್ ವಿಟ್ಲ ಇವರ ಸಹಯೋಗದೊಂದಿಗೆ ಇಂದು (ಆ.1) ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ದ.ಕ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿಮೋಹನ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ರೋಟರಿಕ್ಲಬ್ ವಿಟ್ಲದ ಅಧ್ಯಕ್ಷರಾದ ಅಣ್ಣಪ್ಪ ಸಾಸ್ತಾನ ಉದ್ಘಾಟಿಸಿದರು. ವಿಟ್ಲದ ಪ್ರೊಬೆಷನರಿ ಪಿಎಸ್ಐ ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಟ್ಲ ವಲಯದ ಜೋನ್ ಸೆಕ್ರೆಟರಿ ಹಾಗೂ ವಕೀಲರಾದ ಜಯರಾಮ ರೈ, ವಿಟ್ಲ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಕುಮಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಶೇಖರ್, ವಿಟ್ಲ ಘಟಕ ಅಧಿಕಾರಿ ಸಂಜೀವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಬಾಲಕೃಷ್ಣ ಪೂಜಾರಿ ನಿರ್ವಹಿಸಿದರು. ರೋಟರಿ ಕ್ಲಬ್ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق