ನೀರುಮಾರ್ಗ: ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ (ರಿ.) ನಾಲ್ಕುಬೆಟ್ಟು ನೀರುಮಾರ್ಗ ಇದರ ವತಿಯಿಂದ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೀರುಮಾರ್ಗ ಗ್ರಾಮಕ್ಕೆ ಸಂಬಂಧಪಟ್ಟ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಸುಮಾರು 85 ಮಕ್ಕಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸೇಂಟ್ ಜೋಸೆಫ್ ಇಂಗ್ಲೀಷ್ ಮಿಡಿಯಂ ಅಡ್ಯಾರ್ ಪದವು ಶಾಲೆಯಲ್ಲಿ 2020-2021ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇಕಡಾ 96.32 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ಕಾವ್ಯಶ್ರೀ ಕುಂಡೇವು ಇವರಿಗೆ ಸನ್ಮಾನಿಸಲಾಯಿತು.
ಅತಿಥಿಗಳಾದ ಫಲಾನುಭವಿಗಳ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಯುತ ಗೋಕುಲ್ ದಾಸ್ ಶೆಟ್ಟಿ, ಹಾಗೂ ಮಂಗಳೂರಿನ ನ್ಯಾಯವಾದಿ ಸತೀಶ್ ಕಂಪ BA. LLB, ಬೆತೆಲ್ ಎರೆಂಜರ್ಸ್ ವಾಮಂಜೂರು ಇದರ ಮಾಲಕ ಸ್ಟ್ಯಾನ್ಲೀ ಪ್ರೇಮ್, ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸತ್ಯಾಕ್ಷಿ, ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯೆಯಾದ ಶ್ರೀಮತಿ ವೀಣಾ ಭಾಸ್ಕರ್, ಸಂಘದ ಉಪಾಧ್ಯಕ್ಷರಾದ ಯಶೋಧರ್ ಟೈಲರ್ ಕುಂಡೇವು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق