ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರಳಲ್ಲಿ ನಾಗರಹಾವು ಹಾಕಿಕೊಂಡ ವೃದ್ಧ ನ ವಿಡಿಯೋ ವೈರಲ್

ಕೊರಳಲ್ಲಿ ನಾಗರಹಾವು ಹಾಕಿಕೊಂಡ ವೃದ್ಧ ನ ವಿಡಿಯೋ ವೈರಲ್

 


ಬೆಳಗಾವಿ : ಹಾವೆಂದರೆ ಎಲ್ಲರಿಗೂ ಭಯ ಇರುವುದು ಸಹಜ ಅಂತಹದರಲ್ಲಿ ವೃದ್ಧನೋರ್ವ ಹಾವನ್ನು ಯಾವುದೇ ಭಯವಿಲ್ಲದೆ ಗಂಟೆಗಟ್ಟಲೇ ಕೊರಳಲ್ಲಿ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಶನಿವಾರ ಮನೆಯೊಳಗೆ ಬಂದಿದ್ದ ಹಾವನ್ನು ವೃದ್ಧನೋರ್ವ ಕೊರಳಲ್ಲಿ ಸುತ್ತಿಕೊಂಡು ಸೈಕಲ್‌ ಸವಾರಿ ಮಾಡಿದ್ದಾನೆ. 


ಅಲ್ಲದೇ ಆ ಹಾವನ್ನು ಕೊರಳಲ್ಲಿ ಸುತ್ತಿಕೊಂಡೇ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ.


ಹಾವನ್ನು ಕೊರಳಿಗೆ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿದ್ದಾಗ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಈತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.

0 تعليقات

إرسال تعليق

Post a Comment (0)

أحدث أقدم