ಸುರತ್ಕಲ್: ಕರ್ನಾಟಕ ಸರಕಾರದ ವಿಶೇಷ ಅನುದಾನದ ಮೂಲಕ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್ 2 ರ ಸುರತ್ಕಲ್ ತಡಂಬೈಲ್ ವೆಂಕಟರಮಣ ಕಾಲೋನಿ ರಸ್ತೆಯನ್ನು 25 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣ ಮತ್ತು ಸುರತ್ಕಲ್ ಮಧ್ಯ ಅಂಬೇಡ್ಕರ್ ಕಾಲನಿ ರಸ್ತೆಯನ್ನು 22.25 ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣ ಮಾಡುವ ಅಭಿವೃದ್ಧಿ ಯೋಜನೆಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಭಾಜಪಾ ಉತ್ತರ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಮನಪಾ ಸ್ಥಳೀಯ ಸದಸ್ಯೆ ಶ್ವೇತಾ ಪೂಜಾರಿ, ಶಕ್ತಿ ಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ, ಸಹಪ್ರಮುಖ್ ರಾಕೇಶ್ ಬಂಗೇರ, ಬೂತ್ ಅಧ್ಯಕ್ಷ ಸಂತೋಷ್ ತಡಂಬೈಲ್, ಪ್ರಮುಖರಾದ ಪದ್ಮಾವತಿ ಕೋಡಿಪಾಡಿ, ಜಯೇಶ್ ಗೋವಿಂದ, ಲಕ್ಷ್ಮಣ್ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿ, ಜಯಂತ್, ರವಿ, ನವೀನ್, ಶಶಿ, ರವಿ ಶೆಟ್ಟಿ, ಪ್ರವೀಣ್ ಉಪಸ್ಥಿತರಿದ್ದರು.
إرسال تعليق