ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೂಡ್ಲಿಗಿ ;ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸಾವು

ಕೂಡ್ಲಿಗಿ ;ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸಾವು

 


ಕೂಡ್ಲಿಗಿ: ಚಲಿಸುತ್ತಿದ್ದ ಲಾರಿ ಕರಡಿ ಮೇಲೆ ಹೋಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.


ತಾಲ್ಲೂಕಿನ ಗುಡೇಕೋಟೆ ಗ್ರಾಮದ ಬಳಿ ಕರಡಿ ಧಾಮವಿದ್ದು, ಇದರ ಪಕ್ಕ ಅರಣ್ಯ ಅಮಲಾಪುರ ಬಳಿ ಅರಣ್ಯದ ಮೂಲಕ ಆಹಾರ ಹುಡುಕಿಕೊಂಡು ಬಂದಿರುವ ಕರಡಿಯು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಲಾರಿಯೊಂದು ಹರಿದಿದ್ದರಿಂದ ಸ್ಥಳದಲ್ಲೇ ಸತ್ತು ಹೋಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸತ್ತು ಬಿದ್ದಿರುವ ಮಾಹಿತಿಯನ್ನು ಅಮಲಾಪುರದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. 


ಆ ಬಳಿಕ ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಬಿ.ಎಸ್. ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.


 ಕರಡಿಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು.

0 تعليقات

إرسال تعليق

Post a Comment (0)

أحدث أقدم