ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚನ್ನಪಟ್ಟಣ; ಬಿಸಿ ಸಾಂಬಾರ್ ಮಗುವಿನ ಮೈಮೇಲೆ ಬಿದ್ದು, ಮಗು ಸಾವು

ಚನ್ನಪಟ್ಟಣ; ಬಿಸಿ ಸಾಂಬಾರ್ ಮಗುವಿನ ಮೈಮೇಲೆ ಬಿದ್ದು, ಮಗು ಸಾವು

 



ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಸಾವಿಗೀಡಾದ ಘಟನೆ ನಡೆಯಿತು.


ದೇವರಹೊಸಹಳ್ಳಿಯ ಚೌಡೇಶ್​ ಮತ್ತು ರಾಧಾ ದಂಪತಿ ಪುತ್ರ ಧನ್ವಿಕ್​. ಸೋಮವಾರ ರಾತ್ರಿ ಮನೆಯಲ್ಲಿ ಮಗು ಗ್ಯಾಸ್​ ಸ್ಟೌವ್​ನ ಪೈಪ್​ ಹಿಡಿದು ಆಟವಾಡುವಾಗ ಸ್ಟೌವ್​ ಮೇಲಿದ್ದ ಸಾಂಬರ್​ ಪಾತ್ರೆ ಮಗುವಿನ ಮೈಮೇಲೆ ಬಿದ್ದಿದೆ.


ಬಿಸಿ ಸಾಂಬರ್​​ ಮೈಮೇಲೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.


 ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ. 


ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 تعليقات

إرسال تعليق

Post a Comment (0)

أحدث أقدم