ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆದರ್ಶ ವ್ಯಕ್ತಿಗಳನ್ನು ಅನುಸರಿಸಿ, ಆದರೆ ಅನುಕರಿಸಬೇಡಿ: ಪ್ರೊ. ಸುಬ್ಬಪ್ಪ ಕೈಕಂಬ

ಆದರ್ಶ ವ್ಯಕ್ತಿಗಳನ್ನು ಅನುಸರಿಸಿ, ಆದರೆ ಅನುಕರಿಸಬೇಡಿ: ಪ್ರೊ. ಸುಬ್ಬಪ್ಪ ಕೈಕಂಬ



ಪುತ್ತೂರು: ಜೀವನದಲ್ಲಿ ನಾವು ಗಳಿಸಿಕೊಳ್ಳಬೇಕಾದದ್ದು ನೈತಿಕ ಶಕ್ತಿ.ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವ ಶೋಚನೀಯ ಸ್ಥಿತಿಯಿಂದ ಹೊರಬಂದು ಯುವಜನತೆ  ಮೊದಲು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ದೇಶವನ್ನು ಉದ್ಧರಿಸುವ ಮುನ್ನ ನಮ್ಮನ್ನು ನಾವು ಉದ್ಧರಿಸಿಕೊಳ್ಳಬೇಕು ಎಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಹೇಳಿದರು.  


 ಅವರು ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಇಲ್ಲಿನ   ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕೋಶ,  ಐಕ್ಯೂಎಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ 'ಯುವಜನತೆ ಮತ್ತು ಜೀವನ ಮೌಲ್ಯಗಳು' ರಾಜ್ಯಮಟ್ಟದ ಆನ್ಲೈನ್ ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೋಮವಾರ  ಮಾತನಾಡಿದರು.  


ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಯಾವುದೇ ಉಪದೇಶದ ಅಗತ್ಯವಿಲ್ಲ. ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡಬೇಕಾದರೆ ಮನದಲ್ಲಿನ ಮೌಢ್ಯವನ್ನು ತೊಲಗಿಸಬೇಕು. ನಾವು ಆದರ್ಶದಿಂದ ಬದುಕಬೇಕಾದರೆ ಆದರ್ಶ ವ್ಯಕ್ತಿಗಳನ್ನು ಅನುಸರಿಸಬೇಕು ಬದಲಾಗಿ ಅವರನ್ನು ಅನುಕರಿಸಬಾರದು ಎಂದು ತಿಳಿಸಿದರು.  


ಕಾರ್ಯಕ್ರಮಕ್ಕೇ ಚಾಲನೆ ನೀಡಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ, ಭಾರತ ಬಹುಸಂಸ್ಕೃತಿಯ ದೇಶ.ರಾಷ್ಟ್ರೀಯ ಸೇವಾ ಯೋಜನೆಯು ಅತ್ಯಂತ ಪ್ರಗತಿಪರ ಮತ್ತು ಪ್ರಾಯೋಗಿಕ ಸಂಸ್ಥೆ. ಯುವಜನತೆಯನ್ನು ಒಗ್ಗಟ್ಟಾಗಿ ರಾಷ್ಟ್ರದ ಶಕ್ತಿಯನ್ನಾಗಿ ಮಾಡುತ್ತಿರುವುದು ರಾಷ್ಟ್ರೀಯ ಸೇವಾ ಯೋಜನೆ. ಬಹು ಸಂಸ್ಕೃತಿಯ ಪ್ರತೀಕವಾದ ಯುವಜನರಲ್ಲಿ ನಮ್ಮ ದೇಶದ ಭವಿಷ್ಯ ಭದ್ರವಾಗಿದೆ ಎಂದು ಅಭಿಪ್ರಾಯಪಟ್ಟರು.  

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರಕಾರದ ಎನ್ಎಸ್ಎಸ್ ಅಧಿಕಾರಿ  ಪ್ರತಾಪ್ ಲಿಂಗಯ್ಯ ಮಾತನಾಡಿ, ಯಾವ ಶಿಕ್ಷಣ ಗುರುಹಿರಿಯರಿಗೆ ಗೌರವ ಕೊಡುವುದಿಲ್ಲವೋ ಅದು ಶಿಕ್ಷಣವೇ ಅಲ್ಲ ಎಂದರು. 


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯುಪಿನ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ಒಂದು ಜೀವನ ಶೈಲಿ ಎಂದರು.  


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಜಿ. ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ. ಕೆ. ಎ ಮಾತನಾಡಿ ಜೀವಕ್ಕೆ ಜೀವ ತುಂಬುವ ಕಾರ್ಯಕ್ರಮ ಇದಾಗಿದೆ ಎಂದರು.


ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ವಿದ್ಯಾ.ಕೆ.ಎನ್ ಸ್ವಾಗತಿಸಿ, ಶ್ರೀನಾಥ್ ವಂದಿಸಿದರು.ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ಸುಮೇಧ ಕಾರ್ಯಕ್ರಮವನ್ನು ನಿರೂಪಿಸಿದರು.


-ಕೃತಿಕಾ. ಬಿ

ದ್ವಿತೀಯ ಪತ್ರಿಕೋದ್ಯಮ 

ವಿವೇಕಾನಂದ ಕಾಲೇಜು

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم