ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇಂದ್ರ ಸರಕಾರದ ಪರವಾಗಿ ಹೈಕೋರ್ಟ್‌ಗೆ ಬೆಳ್ತಂಗಡಿ ತಾಲೂಕಿನ ಇಬ್ಬರು ವಕೀಲರ ನೇಮಕ

ಕೇಂದ್ರ ಸರಕಾರದ ಪರವಾಗಿ ಹೈಕೋರ್ಟ್‌ಗೆ ಬೆಳ್ತಂಗಡಿ ತಾಲೂಕಿನ ಇಬ್ಬರು ವಕೀಲರ ನೇಮಕ



ಬೆಳ್ತಂಗಡಿ: ಕೇಂದ್ರ ಸರಕಾರದ ಪರವಾಗಿ ರಾಜ್ಯ ಹೈಕೋರ್ಟ್‌ಗೆ 6 ಮಂದಿ ಹಿರಿಯ ವಕೀಲರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ 2 ಮಂದಿ ಬೆಳ್ತಂಗಡಿ ತಾಲೂಕಿನವರು ಎನ್ನುವುದು ವಿಶೇಷ.

ಹೈಕೋರ್ಟ್ ವಕೀಲರಾದ ಎಸ್. ರಾಜಶೇಖರ್, ರಾಜೇಶ್ ರೈ ಕೆ., ರಾಜಾರಾಮ್ ಸೂರ್ಯಂಬೈಲು, ಪ್ರಿಯಾಂಕ ಎಸ್. ಭಟ್, ಕೆ. ಅಪರಾಜಿತ ಆರಿಗ, ಪಿ. ಕರುಣಾಕರ ಅವರನ್ನು 2015ರಲ್ಲಿ ಕೇಂದ್ರ ಸರಕಾರದ ಪರವಾಗಿ ರಾಜ್ಯ ಹೈಕೋರ್ಟ್‌ಗೆ ಹಿರಿಯ ವಕೀಲರಾಗಿ ನೇಮಕ ಮಾಡಲಾಗಿತ್ತು. ಇದೀಗ ಅವರನ್ನು ಮತ್ತೆ ಮರುನೇಮಕ ಮಾಡಿ ಆದೇಶ ಹೊರಡಿಸಿದೆ.

ಎಸ್. ರಾಜಶೇಖರ್ ಮೂಲತಃ ಬೆಳ್ತಂಗಡಿಯ ಮೊಗ್ರು ಹಿಲಿಯಾರು ನಿವಾಸಿ. ಕಂಬಳ ಹೋರಾಟದ ಪರವಾಗಿಯೂ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಇವರು ಹಿಲಿಯಾರು ದಿ. ವೆಂಕಟ್ರಮಣ ಭಟ್, ತಾಯಿ ಸರೋಜಾ ವಿ. ಭಟ್‌ರವರ ಪುತ್ರ. 

ಪಿ. ಕರುಣಾಕರ ಅವರು ಬೆಳ್ತಂಗಡಿಯ ಕೊಯ್ಯೂರು ಗ್ರಾಮದ  ಡೊಂಬಯ್ಯ ಗೌಡ ಹಾಗೂ ಉಮಾವತಿ ದಂಪತಿ ಪುತ್ರರಾಗಿದ್ದು ಬೆಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


0 تعليقات

إرسال تعليق

Post a Comment (0)

أحدث أقدم