ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದ ಡ್ರೈನೇಜ್ ಸಮಸ್ಯೆ: ಸರಿಪಡಿಸಲು ಶಾಸಕರ ಸೂಚನೆ

ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದ ಡ್ರೈನೇಜ್ ಸಮಸ್ಯೆ: ಸರಿಪಡಿಸಲು ಶಾಸಕರ ಸೂಚನೆ

ಸ್ಥಳೀಯರ ದೂರಿನ ಮೇರೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಾ ವೈ ಭರತ್ ಶೆಟ್ಟಿ 

ರೈಲ್ವೆ ಇಲಾಖೆ ಪ್ರಮಾದದಿಂದ ಹುಟ್ಟಿಕೊಂಡ ಸಮಸ್ಯೆ 

ಸಂಸದರೊಂದಿಗೆ ಮಾತಕತೆ; ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸಂಸದರಿಂದ ಸೂಚನೆ



ಮಂಗಳೂರು: ಇತಿಹಾಸ ಪ್ರಸಿದ್ಧ ಸುಮಾರು 800 ವರ್ಷಗಳಷ್ಟು ಪ್ರಾಚೀನ ಸ್ವಯಂಭೂ ಅರ್ಕುಳ  ಶ್ರೀವರದೇಶ್ವರ ದೇವಸ್ಥಾನ ಬಳಿ ರೈಲ್ವೆ ಇಲಾಖೆಯವರು ಗೋಡೆಕಟ್ಟುವ ಕಾಮಗಾರಿ ಸಂದರ್ಭದಲ್ಲಿ ದೇವಸ್ಥಾನದ ಡ್ರೈನೇಜ್ ವ್ಯವಸ್ಥೆಗೆ ಲೋಪವಾಗಿತ್ತು. ಇದರ ಪರಿಣಾಮ ದೇವಸ್ಥಾನದ ಅಂಗಣ ತುಂಬಾ ಮಳೆನೀರು ತುಂಬಿಕೊಂಡಿತ್ತು.


ಈ ವಿಷಯವನ್ನು ಅರ್ಕುಳ ಗ್ರಾಮಸ್ಥರು ಶಾಸಕರಾದ ಡಾ ವೈ ಭರತ್ ಶೆಟ್ಟಿಯವರಲ್ಲಿ ತಿಳಿಸಿದಾಗ ಇದು ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ವ್ಯಾಪ್ತಿಗೆ ಬರುವ ವಿಷಯವಾಗಿರುವುದರಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಶಾಸಕರು ಮಾತನಾಡಿದರು.


ಸಂಸದರು ರೈಲ್ವೆ ಇಲಾಖೆಯವರೊಂದಿಗೆ ಮಾತನಾಡಿ ತ್ವರಿತವಾಗಿ ಸರಿಪಡಿಸುವಂತೆ ಸೂಚನೆ ನೀಡಿದರು. ಶಾಸಕರು ಸ್ವತಃ ದೇವಸ್ಥಾನಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮುಂದಿನ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿ ತಮ್ಮ ಸಲಹೆಯನ್ನು ನೀಡಿದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم