ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಸರಾಂತ ಉದ್ಯಮಿ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ನಿಧನ

ಹೆಸರಾಂತ ಉದ್ಯಮಿ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ನಿಧನ



ಹೈದರಾಬಾದ್: ವಿಶ್ವವಿಖ್ಯಾತ ರಾಮೋಜಿ ಫಿಲ್ಮ್‌ ಸಿಟಿ ಸಂಸ್ಥಾಪಕ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರು ಶನಿವಾರ ಬೆಳಗಿನ ಜಾವ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.


ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಉಲ್ಬಣಿಸಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.


ರಾಮೋಜಿ ಫಿಲ್ಮ್‌ ಸಿಟಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಅವರ ನಿವಾಸದಲ್ಲೇ ಅಂತಿಮ ದರ್ಶನದ ಅವಕಾಶ ನೀಡಲಾಗಿದೆ.


ರಾಮೋಜಿ ರಾವ್ ಅವರು 1936ರ ನವೆಂಬರ್ 16ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರು. ನಂತರ ಹಲವಾರು ಸವಾಲುಗಳನ್ನು ಎದುರಿಸಿ ಖ್ಯಾತ ಉದ್ಯಮಿಯಾಗಿ ಬೆಳೆದು ನಿಂತರು.


ಅವರ ನಿಧನದ ಸುದ್ದಿ ತಿಳಿದು ಬಿಜೆಪಿ ಹಿರಿಯ ನಾಯಕ ಜಿ. ಕಿಶನ್ ರೆಡ್ಡಿ ಸೇರಿದಂತೆ ಅನೇಕ ಧುರೀಣರು ಸಂತಾಪ ಸೂಚಿಸಿದ್ದಾರೆ.


ರಾಮೋಜಿ ರಾವ್ ಅವರು ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್‌ ಸ್ಟುಡಿಯೋ ಇರುವ ರಾಮೋಜಿ ಫಿಲ್ಮ್‌ ಸಿಟಿಯನ್ನು ಸ್ಥಾಪಿಸಿದ್ದಾರೆ. ಮಾರ್ಗದರ್ಶಿ ಚಿಟ್‌ ಫಂಡ್‌, ಈನಾಡು ಪತ್ರಿಕೆ, ಈಟಿವಿ ಸಮೂಹ, ರಮಾದೇವಿ ಪಬ್ಲಿಕ್‌ ಸ್ಕೂಲ್‌, ಪ್ರಿಯಾ ಫುಡ್ಸ್‌, ಕಲಾಂಜಲಿ, ಉಚಾಕಿರಣ ಮೂವೀಸ್, ಮಯೂರಿ ಫಿಲ್ಮ್‌ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್‌ ಆಫ್ ಹೋಟೆಲ್ಸ್‌ ಅನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರದ ದಿಗ್ಗಜವಾಗಿ ಬೆಳೆದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post