ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿವೃತ್ತ ಶಿಕ್ಷಕ ಶಿರೂರು ಹೈಕಾಡಿಮನೆ ಸಂಜೀವ ಶೆಟ್ಟಿ ನಿಧನ

ನಿವೃತ್ತ ಶಿಕ್ಷಕ ಶಿರೂರು ಹೈಕಾಡಿಮನೆ ಸಂಜೀವ ಶೆಟ್ಟಿ ನಿಧನ


ಕುಂದಾಪುರ: ಕೊಕ್ಕರ್ಣೆ ಹೈಸ್ಕೂಲಿನಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸುದೀರ್ಘ ಕಾಲದ ವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಅಪಾರ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಶಿರೂರು ಹೈಕಾಡಿ ಮನೆ ಸಂಜೀವ ಶೆಟ್ಟಿಯವರು (82) ಇಂದು ಕುಂದಾಪುರದ ಸ್ವಗೃಹದಲ್ಲಿ ನಿಧನರಾದರು.


ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಹುಕಾಲ ಕೊಕ್ಕಣೆ೯ ಕೇೂಟಂಬೈಲಿನಲ್ಲಿ ನೆಲೆಸಿದ್ದ ಸಂಜೀವ ಶೆಟ್ಟಿಯವರು ಬಹು ಜನರ ಪ್ರೀತಿಗೂ ಪಾತ್ರರಾಗಿದ್ದರು.


ನುಡಿನಮನ:

"ಶಿಕ್ಷಣ ಅಂದರೆ ಖಾಲಿ ಕೊಡಪಾನಕ್ಕೆ ನೀರು ತುಂಬಿಸುವ ಕೆಲಸವಲ್ಲ ಬದಲಾಗಿ ಜ್ಞಾನದ ಕಣ್ಣನ್ನು ಬದುಕಿನತ್ತ ತಿರುಗಿಸುವುದೇ ನಿಜವಾದ ಶಿಕ್ಷಣ" ಇದರ ಪ್ರಸ್ತುತತೆಯನ್ನು ನಮಗೆ ಬಣ್ಣಿಸಿ ಉಣ್ಣಿಸಿ ಕೊಟ್ಟವರು ನಮ್ಮೆಲ್ಲರ ಪ್ರೀತಿಯ ಅಭಿಮಾನದ ಗೌರವದ ಮೇಷ್ಟ್ರು  ಅನ್ನಿಸಿಕೊಂಡ ಸಂಜೀವ ಶೆಟ್ರು.


ನಮ್ಮ ಕೊಕ್ಕಣೆ೯ ಹೆೈಸ್ಕೂಲು ಜೀವನ ನೆನಪಿಸಿಕೊಂಡಾಗ ನನಗೆ ನೆನಪಿಗೆ ಬರುವುದು ನಮ್ಮ ಸಮಾಜ ವಿಜ್ಞಾನದ ಗುರುಗಳಾದ ಸಂಜೀವ ಮಾಸ್ಟರ್. ಇಂದು ನಾನು ಒಬ್ಬ ರಾಜ್ಯಶಾಸ್ತ್ರ ಪ್ರಾಧ್ಯಾಪಕನಾಗಿ ನಿಲ್ಲಬೇಕಾದರೂ ಕೂಡಾ ಅದರ ಹಿಂದಿನ ತಾಯಿಬೇರು ಅಂದ್ರೆ ನಮ್ಮ ಸಂಜು ಮಾಸ್ಟರು. ಸಮಾಜ ವಿಜ್ಞಾನದ ಪಾಠ ಮಾಡುವುದು ಸುಲಭದ ಕೆಲಸವಲ್ಲ. ಅದು ಇತಿಹಾಸವಿರಬಹುದು, ಪೌರನೀತಿ ಇರಬಹುದು, ಭೌಗೋಳಿಕ ಪಾಠವಿರಬಹುದು, ಇದಕ್ಕೆ ಜೀವ ತುಂಬಿಸಿ ವಿದ್ಯಾರ್ಥಿಗಳ ಕಣ್ಣು ಮುಂದೆ ತಂದು ನಿಲ್ಲಿಸ ಬೇಕಾದರೆ ಪ್ರಾಪಂಚಿಕ ಜ್ಞಾನದ ವಿಸ್ತರತೆಯ ಜೊತೆಗೆ ಭಾಷಾ ಪ್ರೌಢಿಮೆಯೂ ಬೇಕು. ಇವೆರಡನ್ನೂ ಮೈಗೂಡಿಸಿ ಕೊಂಡು ಪಾಠ ಮಾಡುವ ಕೌಶಲ್ಯವನ್ನು ನಮ್ಮ ಸಂಜು ಮಾಸ್ಟರ್ ಕರಗತ ಮಾಡಿಕೊಂಡಿದ್ದರು.


ಪ್ರತಿನಿತ್ಯ ಪಾಠ ಶುರು ಮಾಡುವ ಮೊದಲು ವಿದ್ಯಾರ್ಥಿಗಳಿಗೆ ರಾಜ್ಯ, ದೇಶ,ವಿದೇಶಗಳ ಸುದ್ದಿ ಬೆಳವಣಿಗೆಯ ಕುರಿತಾಗಿ ಪ್ರಶ್ನೆ ಕೇಳುವುದು ಅವರ ಅಭ್ಯಾಸ. ಹಾಗಾಗಿ ಪತ್ರಿಕೆ ಗಳನ್ನು ಓದುವ ಅಭ್ಯಾಸ ಇವರಿಂದಲೇ ಕಲಿತುಕೊಂಡಿದ್ದೇವೆ. ಇವರ ಇನ್ನೊಂದು ವಿಶೇಷತೆ ಅಂದರೆ ನಾವು ಕೊಡುವ ಉತ್ತರ ಸರಿ ಇರಲಿ ತಪ್ಪಿರಲಿ very good ಅನ್ನುವುದು. ನಾವು ಖುಶಿಯಲ್ಲಿ ಇರಬೇಕಾದರೆ, ಕೊನೆಗೆ ಸರಿ ಉತ್ತರ ಹೇಳಿ ನಮ್ಮ ಮುಖ ನೇೂಡಿ ಮುಗುಳ್ನಗು. ಆವಾಗಲೇ ನಮಗೆ ಗೊತ್ತಾಗುವುದು ನಮ್ಮ ಉತ್ತರ ತಪ್ಪು ಅನ್ನುವುದು.


ತಂಟೆ ಮಾಡಿದ ವಿದ್ಯಾರ್ಥಿಗಳಿಗೆ ಸರಿಯಾಗಿ ತಿದ್ದಿ ನಮ್ಮೆಲ್ಲರ ಬದುಕಿಗೆ ದಿಕ್ಕು ತೇೂರಿದವರು. ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಬೆನ್ನು ತಟ್ಟಿ ಪ್ರೇೂತ್ಸಾಹಿಸುವುದು ಅವರ ಇನ್ನೊಂದು ದೊಡ್ಡ ಗುಣ. ನಾನು ಅವರ ಹತ್ತಿರದ ಸಂಬಂಧಿಕರು. ಆದರೂ ಕೂಡಾ ಅವರೆಂದರೆ ಗುರುವಿನ ಭಯ. ಅಂತೂ ನಮ್ಮ ಸಂಜೀವ ಮಾಸ್ಟರ್ ವಿದ್ಯಾರ್ಥಿಗಳ ಮೇಲೆ ಒತ್ತಿದ ನೆನಪಿನ ಛಾಪು ಎಂದೂ ಮರೆಯಲು ಸಾಧ್ಯವೇ ಇಲ್ಲ. ಇಂದು ಅವರು ಕಲಿಸಿದ ಅದೆಷ್ಟೋ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಬದುಕನ್ನು ಕಟ್ಟಿಕೊಂಡು ಸಂಪನ್ನರಾಗಿದ್ದಾರೆ.

- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

0 تعليقات

إرسال تعليق

Post a Comment (0)

أحدث أقدم