ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಸುರೇಶ ನೆಗಳಗುಳಿ ಅವರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ

ಡಾ. ಸುರೇಶ ನೆಗಳಗುಳಿ ಅವರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ


ಮಂಗಳೂರು: ಗಡಿನಾಡ ಶ್ರೇಯೋಭಿವೃದ್ಧಿ‌ ಟ್ರಸ್ಟ್, ಗಡಿನಾಡ ಧ್ವನಿ ಪತ್ರಿಕೆ ಮತ್ತು ಪ್ರಕಾಶನ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು, ಯುವಜನ್ಮ ಫೌಂಡೇಶನ್ ಟ್ರಸ್ಟ್‌ ಪುತ್ತೂರು ವತಿಯಿಂದ ಒಡ್ಯದಲ್ಲಿ ನಡೆದ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಚರ್ಮರೋಗಗಳ ಕ್ಷಾರ ಚಿಕಿತ್ಸಾ ತಜ್ಞ ಮತ್ತು ಬರಹಗಾರ ಗಡಿನಾಡು ಅಡ್ಯನಡ್ಕದ ಡಾ. ಸುರೇಶ ನೆಗಳಗುಳಿ ಇವರನ್ನು ಗಡಿನಾಡ ಧ್ವನಿ ವೈದ್ಯರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಸುದೀರ್ಘ ಕಾಲದ ಪ್ರಾಚಾರ್ಯ ಪದವಿ, ವೈದ್ಯಕೀಯ ಬೋಧನೆ, ವಿಶಿಷ್ಟವಾದ ಚಿಕಿತ್ಸಾ ಪ್ರಕಾರದ ಅನುಭವ ಮತ್ತು ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳನ್ನು ಅನುಲಕ್ಷಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಸಂಘಟಕ  ಡಾ ಹಾಜಿ ಯಸ್ ಅಬ್ಬುಬೋಕರ್ ಆರ್ಕ ಪದವು ತಿಳಿಸಿರುತ್ತಾರೆ.


ಹಿರಿಯ ಸಾಹಿತಿ ಸಮ್ಮೇಳನ‌ ಸರ್ವಾಧ್ಯಕ್ಷ ಮಲಾರ್ ಜಯರಾಮ ರೈ, ಪುತ್ತೂರು ಕ.ಸಾ.ಪ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ಸಹಿತ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


0 تعليقات

إرسال تعليق

Post a Comment (0)

أحدث أقدم