ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಮಿಳು ನಟ ಪ್ರಭು ಗಣೇಶನ್ ಆಸ್ಪತ್ರೆ ದಾಖಲು

ತಮಿಳು ನಟ ಪ್ರಭು ಗಣೇಶನ್ ಆಸ್ಪತ್ರೆ ದಾಖಲು

 


ತಮಿಳು ನಟ ಪ್ರಭು ಗಣೇಶನ್ ಆಸ್ಪತ್ರೆಗೆ ದಾಖಲಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಭಯ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದು ಅಭಿಮಾನಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ನಟ ಪ್ರಭು ಚೆನ್ನೈನ ಮೆಡ್‌ ವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಭು ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಪ್ರಭುದೇವ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಸೇರಿದ್ದರು. ತಪಾಸಣೆ ವೇಳೆ ಅವರ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ.

ಲೇಸರ್‌ ಎಂಡೋಸ್ಕೋಪಿ ಚಿಕಿತ್ಸೆ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗಿದ್ದು ಬೇರೆ ಏನೂ ಸಮಸ್ಯೆ ಇಲ್ಲ. ಶೀಘ್ರದಲ್ಲೇ ಅವರು ಡಿಸ್ಚಾರ್ಜ್‌ ಆಗಲಿದ್ದಾರೆ. ಕೆಲವು ದಿನಗಳು ವಿಶ್ರಾಂತಿ ಪಡೆದರೆ ಮೊದಲಿನಂತೆ ಆಗುತ್ತಾರೆ. ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಭಯ ಪಡುವ ಅಗತ್ಯ ಇಲ್ಲ ಎಂದು ಪ್ರಭು ಕುಟುಂಬ ಸ್ಪಷ್ಟಪಡಿಸಿದೆ.

0 Comments

Post a Comment

Post a Comment (0)

Previous Post Next Post