ಬೆಳ್ತಂಗಡಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳವಾರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು.
ಕುಕ್ಕೆ ಸುಬ್ರಹ್ಮಣ್ಯದಿಂದ ಆಗಮಿಸಿದ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಡಾ| ಹೆಗ್ಗಡೆಯವರ ಅಪ್ತ ಕಾರ್ಯದರ್ಶಿ ಕೃಷ್ಣಸಿಂಗ್ ಮೊದಲಾ ದವರು ಸ್ವಾಗತಿಸಿದರು.
ಬಳಿಕ ರಾತ್ರಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದರು.
ರಾಜ್ಯಪಾಲುರು ಬುಧವಾರ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವರು.
ಬಳಿಕ 11 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಜನಜಾಗೃತಿ ಯೋಜನೆಯಿಂದ ಹಮ್ಮಿಕೊಂಡಿರುವ ವ್ಯಸನಮುಕ್ತರ ನವ ಜೀವನ ಸಮಾವೇಶದಲ್ಲಿ ಭಾಗವಹಿಸಲಿರುವರು. ಅಪರಾಹ್ನ 3ಕ್ಕೆ ಕುದುರೆಮುಖಕ್ಕೆ ತೆರಳಲಿದ್ದಾರೆ. ರಾಜ್ಯಪಾಲರ ಭೇಟಿ ಹಿನ್ನೆಲೆ ಬಿಗಿ ಭದ್ರತೆ ಮಾಡಲಾಗಿದೆ.
إرسال تعليق