ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್‌ ಪಾಟೀಲ್‌ ಅವರ ಪತಿ ನಿಧನ

ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್‌ ಪಾಟೀಲ್‌ ಅವರ ಪತಿ ನಿಧನ

 


ಪುಣೆ: ಭಾರತದ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್‌ ಪಾಟೀಲ್‌ ಅವರ ಪತಿ ದೇವಿಸಿಂಗ್‌ ರಣಸಿಂಗ್‌ ಪಾಟೀಲ್‌ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.


ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಪ್ರತಿಭಾ ದೇವಿ ಸಿಂಗ್‌ ಪಾಟೀಲ್‌, ಪುತ್ರ, ಕಾಂಗ್ರೆಸ್‌ ನಾಯಕ ರಾಜೇಂದ್ರ ಸಿಂಗ್‌ ಶೆಖಾವತ್‌ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ಫೆ.12 ರಂದು ತನ್ನ ಪುಣೆಯ ನಿವಾಸದಲ್ಲಿ ಹುಲ್ಮಾಲುಹಾಸಿನ ಮೇಲೆ ಕುಸಿದು ಬಿದ್ದಿದ್ದರು ಎಂದು ಹೇಳಲಾಗಿದೆ.


ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಆ ಬಳಿಕ ಅವರಿಗೆ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಂಡಿದ್ದವು. 


ಬಿಪಿ, ಕಿಡ್ನಿ ವೈಫಲ್ಯ ಮುಂತಾದವುಗಳಿಂದಾಗಿ ಅವರು ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم