ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಫೆ. 27 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಗಾಗಿ ಬಾನ್ ದನಿ ರೇಡಿಯೋ ಕಾರ್ಯಕ್ರಮ ಪ್ರಸಾರ

ಫೆ. 27 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಗಾಗಿ ಬಾನ್ ದನಿ ರೇಡಿಯೋ ಕಾರ್ಯಕ್ರಮ ಪ್ರಸಾರ

 


ಬೆಂಗಳೂರು : ಶಾಲಾ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಸಾರ ಭಾರತಿಯಲ್ಲಿ ಬಾನ್ ದನಿ ರೇಡಿಯೋ ಕಾರ್ಯಕ್ರಮದಲ್ಲಿ ಪಾಠ ಪ್ರಸಾರ ಮಾಡಲಾಗುತ್ತಿದ್ದು, ಇದೀಗ ಫೆ. 27 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಗಾಗಿ ಬಾನ್ ದನಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆಗಾಗಿ ಬಾನ್‌ದನಿ ಕಾರ್ಯಕ್ರಮಗಳು ದಿನಾಂಕ:27 ಫೆಬ್ರವರಿ-2023 ರಿಂದ ಪ್ರಸಾರಗೊಳ್ಳಲಿದ್ದು, ಈ ಕಾರ್ಯಕ್ರಮಗಳನ್ನು 13 ಆಕಾಶವಾಣಿ ಕೇಂದ್ರಗಳು ಹಾಗೂ 3 ವಿವಿಧ ಭಾರತಿ FM ಕೇಂದ್ರಗಳಿಂದ ಏಕಕಾಲದಲ್ಲಿ ರೇಡಿಯೋ ಅಲ್ಲದೆ, ಸಾಮಾನ್ಯ ಮೊಬೈಲ್, All India Radio Bangalore You Tube Streaming ನಲ್ಲಿ ಮತ್ತು ಜಗತ್ತಿನಾದ್ಯಂತ Prasarabharathi news on air app ನಲ್ಲಿಯೂ ಕೇಳಬಹುದು. ಇದಲ್ಲದೆ All India Radio Bangalore You Tube ನ SSLC 2023 pariksha siddathe play list ನಲ್ಲಿ ಪುನಃ ಕೇಳಿಸಲು ಹಾಗೂ ಅನಿಸಿಕೆ ಹಂಚಿಕೊಳ್ಳಲು ಅವಕಾಶವಿದೆ.

ಕಾರ್ಯಕ್ರಮಗಳನ್ನು ವೇಳಾಪಟ್ಟಿ ಅನ್ವಯ ವಿದ್ಯಾರ್ಥಿಗಳಿಗೆ ಕೇಳಿಸಿ, ಪಾಠಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತಾಗಲು ಹಾಗೂ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಪನಿರ್ದೇಶಕರು( ಅಭಿವೃದ್ಧಿ) ರವರು ಕೆಳಗಿನಂತೆ ಕ್ರಮ ವಹಿಸುವುದು.

ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಆಕಾಶವಾಣಿಯ ಮೂಲಕ ಬಾನ್ ದನಿ ಕಾರ್ಯಕ್ರಮದಡಿ ಶಾಲೆಗಳಲ್ಲಿ ರೇಡಿಯೋ ಪಾಠಗಳನ್ನು ಡಿಸೆಂಬರ್-2022ರ ಮಾಹೆಯಿಂದ ಪ್ರಸಾರ ಮಾಡಲಾಗುತ್ತಿದೆ.

ಬಾನ್ ದನಿ ಕಾರ್ಯಕ್ರಮವು 1 ರಿಂದ 9ನೇ ತರಗತಿಗಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಇಂಗ್ಲಿಷ್ ಕಲಿಕೆಯನ್ನೊಳಗೊಂಡ ಸಾಮಾನ್ಯ ಪಾಠಗಳು ಮತ್ತು 4 ಹಾಗೂ 5 ನೇ ತರಗತಿಗಳಿಗೆ ಕನ್ನಡ ಮತ್ತು ಗಣಿತ ವಿಷಯಗಳ ಕಲಿವಿನ ಫಲ ಆಧಾರಿತ ಪಾಠಗಳನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವು ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2.35 ರಿಂದ 3.00 ಗಂಟೆಯವರೆಗೆ ಪ್ರಸಾರಗೊಳ್ಳಲಿವೆ.


0 تعليقات

إرسال تعليق

Post a Comment (0)

أحدث أقدم