ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳು ರಂಗಭೂಮಿ ಹಾಸ್ಯನಟ ಅರವಿಂದ್ ಬೋಳಾರ್ ಗೆ ರಸ್ತೆ ಅಪಘಾತ; ಆಸ್ಪತ್ರೆ ದಾಖಲು

ತುಳು ರಂಗಭೂಮಿ ಹಾಸ್ಯನಟ ಅರವಿಂದ್ ಬೋಳಾರ್ ಗೆ ರಸ್ತೆ ಅಪಘಾತ; ಆಸ್ಪತ್ರೆ ದಾಖಲು

 


ಮಂಗಳೂರು: ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತವಾದ ಘಟನೆಯೊಂದು ಮಂಗಳೂರು ಪಂಪ್‌ವೆಲ್ ಬಳಿ ಜ.30 ರಂದು ಸಂಭವಿಸಿದೆ.

ಎದುರುಗಡೆಯಿಂದ ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ವಾಹನವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬೋಳಾರ್ ಅವರು ಸಡನ್‌ ಆಗಿ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ಬೈಕ್‌ ಸ್ಕಿಡ್‌ ಆಗಿ ಬಿದ್ದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಬೋಳಾರ್‌ ಅವರ ಕೈ- ಕಾಲುಗಳಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಅರವಿಂದ್ ಬೋಳಾರ್‌ರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ. ಅವರನ್ನು ಚಿಕಿತ್ಸೆಗಾಗಿ ಯೆನಪೋಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.0 Comments

Post a Comment

Post a Comment (0)

Previous Post Next Post